ಮಹಾರಾಜ ಕಾಲೇಜು ಮೇಲ್ಛಾವಣಿ ಸೀಲಿಂಗ್ ಕುಸಿತ, ಸ್ಥಳಕ್ಕೆ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಭೇಟಿ

ಮೈಸೂರು,ಫೆಬ್ರವರಿ,10,2021(www.justkannada.in) : ಮಹಾರಾಜ ಕಾಲೇಜು ಮೇಲ್ಛಾವಣಿ ಸೀಲಿಂಗ್ ಕುಸಿತ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.jk

ಬಳಿಕ ಮಾತನಾಡಿದ ಅವರು, ನೂರು ವರ್ಷಕ್ಕೂ ಹೆಚ್ಚು ಹಳೆಯದಾದ ಕಟ್ಟಡ ಇದಾಗಿದೆ. ತಕ್ಷಣ ಕ್ರಮ ಕೈಗೊಳ್ಳುತ್ತೇನೆ. ಪಾರಂಪರಿಕ ಕಟ್ಟಡ ಆಗಿರುವುದರಿಂದ ಕುಶಲ ಕರ್ಮಿಗಳು ಬೇರೆ ಇದ್ದಾರೆ. ಹಾಗಾಗಿ, ಅವರನ್ನ ಸಂಪರ್ಕಿಸಿ ನಂತರ ಚಿಂತನೆ ಮಾಡುತ್ತೇವೆ ಎಂದಿದ್ದಾರೆ.

Maharaja College,Roof ceiling,fall,place,Mysore VV,Registrar,Prof.R.Shivappa

ಕಟ್ಟಡದ ಹೊರಭಾಗದಲ್ಲಿ ಗಿಡ ಗಂಟೆ ತೆರವು ಮಾಡಲಾಗುತ್ತಿದೆ. ಇದರಿಂದ ಸೀಲಿಂಗ್ ಗೆ ತೊಂದರೆ ಆಗಿರಬಹುದು ಈ ಕುರಿತು ಪರಿಶೀಲಿಸಬೇಕು. ವಿವಿ ಕ್ಯಾಂಪಸ್ ನಲ್ಲಿರುವ ಜಯಲಕ್ಷ್ಮಿ ವಿಲಾಸ್ ಅರಮನೆಯಲ್ಲಿ ಕೂಡ ಇದೇ ರೀತಿ ಆಗಿತ್ತು. ತಜ್ಞರ ಸಮಿತಿ ರಚಿಸಿದ್ದೇವೆ. ಸಮಿತಿಯು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಕಟ್ಟಡದಲ್ಲಿ ನಡೆಯುತ್ತಿದ್ದ ತರಗತಿಗಳನ್ನ ಬೇರೆಡೆಗೆ ಸ್ಥಳಾಂತರಿಸಲಾಗಿದೆ‌‌ ಎಂದು ತಿಳಿಸಿದ್ದಾರೆ.

key words : Maharaja College-Roof ceiling-fall-place-Mysore VV-Registrar-Prof.R.Shivappa