ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ- ಮಾಜಿ ಸಿಎಂ ಸಿದ್ಧರಾಮಯ್ಯ.

Promotion

ಶಿವಮೊಗ್ಗ,ನವೆಂಬರ್,28,2022(www.justkannada.in): ಗಡಿವಿವಾದ ಸಂಬಂಧ ಮಹಾಜನ್ ವರದಿಯಲ್ಲೇ ಕೆಲವು ಪ್ರದೇಶಗಳು  ಕರ್ನಾಟಕಕ್ಕೆ ಸೇರಿದ್ದು ಎಂದು ಉಲ್ಲೇಖವಿದೆ. ಹೀಗಾಗಿ ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದರು.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಮಹಾರಾಷ್ಟ್ರ ಸರ್ಕಾರವೇ ಮಹಾಜನ್ ಸಮಿತಿ ರಚಿಸಿತ್ತು.  ಗಡಿ ವಿವಾದ ವಿಚಾರದಲ್ಲಿ ಮಹಾಜನ್  ವರದಿಯೇ ಅಂತಿಮ. ಕೆಲವು ಪ್ರದೇಶ ಕರ್ನಾಟಕಕ್ಕೆ ಸೇರಿದ್ದು ಎಂದು ಅವರೇ ಹೇಳಿದ್ದಾರೆ. ಹೀಗಾಗಿ ಗಡಿ ವಿಚಾದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದರು.

ಮಹಾರಾಷ್ಟ್ರ ನಾಯಕರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅವರಿಗೆ  ಮಾತ್ರ ಕಲ್ಲು ಹೊಡೆಯೋಕೆ ಬರುತ್ತಾ..?  ಕೆಎಸ್ ಆರ್ ಟಿಸಿ ಬಸ್ ಗಳ ಮೇಲೆ ಯಾರೂ ಕಲ್ಲು ತೂರಾಟ ಮಾಡಬಾರದು. ಮಹಾರಾಷ್ಟ್ರ ಸಿಎಂ ಈ ಬಗ್ಗೆ ಗಮನಹರಿಸಿ ಕ್ರಮಕೈಗೊಳ್ಳಲಿ ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.

Key words: Mahajan -report – final – border issue – Former CM- Siddaramaiah.