ನಾಳೆ ಮಹಾಶಿವರಾತ್ರಿ ಸಂಭ್ರಮ: ಮೈಸೂರಿನಲ್ಲಿ ಸಕಲ ಸಿದ್ದತೆ…

Promotion

ಮೈಸೂರು,ಮಾರ್ಚ್,10,2021(www.justkannada.im): ನಾಳೆ ಮಹಾಶಿವರಾತ್ರಿ ಹಬ್ಬದ ಸಂಭ್ರಮವಾಗಿದ್ದು, ಹಬ್ಬದ ಆಚರಣೆಗೆ ಮೈಸೂರು ನಗರದ ಶಿವನ ದೇವಾಲಯದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.jk

ಮೈಸೂರು ಅರಮನೆ ಆವರಣದಲ್ಲಿರುವ ತ್ರೀನೇಶ್ವರ ದೇವಾಲಯದಲ್ಲಿ ಪ್ರತಿವರ್ಷ ಶಿವರಾತ್ರಿ ಹಬ್ಬ ಅದ್ದೂರಿಯಾಗಿ ನಡೆಯಲಿದೆ. ಹೀಗಾಗಿ ಹಬ್ಬದ ಸಂಭ್ರಮಕ್ಕೆ  ಭರದ ಸಿದ್ದತೆ ನಡೆಯುತ್ತಿದ್ದು, ಸಹಸ್ರಾರು ಮಂದಿ ಭಕ್ತರು ಬರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮ ಕೂಗೊಳ್ಳಲಾಗುತ್ತಿದೆ.Maha Shivaratri-trinetreshwar Temple -Mysore

ಭಕ್ತರ ನೂಕುನುಗ್ಗಲನ್ನು ನಿಯಂತ್ರಿಸುವ ಸಲುವಾಗಿ ದೇವಸ್ಥಾನದಿಂದ ಒಂದು ಕಿ.ಮೀ ಗಟ್ಟಲೇ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ.  ನಾಳೆ ಬೆಳಗ್ಗೆ 6ರಿಂದ ಮಧ್ಯರಾತ್ರಿಯವರೆಗೂ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹಬ್ಬದ ಪ್ರಯುಕ್ತ ದೇಗುಲದಲ್ಲಿ ವಿಶೇಷ ಪೂಜೆಗಳು ನೆರವೇರುತ್ತದೆ. ಇನ್ನು  ಕೋವೀಡ್ ಭೀತಿ ಹಿನ್ನೆಲೆ ಮಾಸ್ಕ್  ಧರಿಸಿ ದರ್ಶನ ಮಾಡುವಂತೆ ಸೂಚನೆ ನೀಡಲಾಗಿದೆ.

Key words: Maha Shivaratri-trinetreshwar Temple -Mysore