“ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಅಂಚೆ ಪತ್ರ ಚಳುವಳಿ”

kannada t-shirts

ಮೈಸೂರು,ಫೆಬ್ರವರಿ,19,2021(www.justkannada.in)  : ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ಮೈಸೂರು ಜಿಲ್ಲಾ ಮಡಿವಾಳರ ಪರಿಶಿಷ್ಟ ಜಾತಿ ಹೋರಾಟ ಸಮಿತಿಯಿಂದ ಅಂಚೆ ಪತ್ರ ಚಳುವಳಿ ನಡೆಸಲಾಯಿತು.

jk

ಅಶೋಕರಸ್ತೆಯ ಪ್ರಧಾನ ಅಂಚೆ ಕಚೇರಿ ಮುಂಭಾಗ ಜಮಾವಣೆಗೊಂಡ ಸಮಿತಿ ಸದಸ್ಯರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಅಂಚೆ ಪೆಟ್ಟಿಗೆಗೆ ಅಂಚೆ ಪತ್ರಗಳನ್ನು ಹಾಕುವ ಮೂಲಕ ಒತ್ತಾಯಿಸಿದರು.

ಪ್ರೊ.ಡಾ.ಅನ್ನಪೂರ್ಣಮ್ಮನವರ ವರದಿ ಜಾರಿ ಮಾಡಬೇಕು. ಮಡಿವಾಳ ಸಮುದಾಯ ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದ್ದು, ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಸೂಕ್ತ ಸ್ಥಾನಮಾನ ನೀಡುವಂತೆ ಒತ್ತಾಯಿಸಿದರು.

Madiwala-Community-Scheduled Caste-add-Postal-movement 

ಪರಿಶಿಷ್ಟ ಜಾತಿಗೆ ಸೇರಿಸುವಂತೆ ಆಗ್ರಹಿಸಿ ಮಡಿವಾಳ ಮಾಚಿದೇವರ ಜನ್ಮ ಸ್ಥಳ ದೇವರ ಹಿಪ್ಪರಗಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುವುದಾಗಿ ಸಮಾಜದ ಮುಖಂಡರ ಹೇಳಿದರು.

ಅಂಚೆ ಪತ್ರ ಚಳುವಳಿಯಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

key words : Madiwala-Community-Scheduled Caste-add-Postal-movement

website developers in mysore