ಚಾಕು ಹಾಕಿ ಹೋದವರಿಗೆ ಜನರೇ ಪಾಠ ಕಲಿಸ್ತಾರೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…

Promotion

ಮೈಸೂರು,ಮಾರ್ಚ್,11,2021(www.justkannada.in): ದೇವೇಗೌಡರ ಬೆನ್ನಿಗೆ ಚೂರಿ ಹಾಕೋದೆ ಆಗೋಗಿದೆ.  ಯಾರನ್ನ ನಂಬಿರುತ್ತಾರೋ ಅವರೇ ಚೂರಿ ಹಾಕುತ್ತಾರೆ. ಚಾಕು ಹಾಕಿ ಹೋದವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.jk

ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಕುರಿತು ಮೈಸೂರಿನಲ್ಲಿ ಇಂದು ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮಧು ಬಂಗಾರಪ್ಪ ಸಿದ್ಧರಾಮಯ್ಯ ಭೇಟಿ ವಿಚಾರ ಇದರಲ್ಲಿ ಯಾವುದೇ ವಿಶೇಷ ಇಲ್ಲ. ಇದು ಹಳೆಯ ಕಥೆ. ಇದು ಕಳೆದ 1 ವರ್ಷದಿಂದ ನಡೆಯುತ್ತಿರುವ ಬೆಳವಣಿಗೆ. ಈ ಬೆಳಖವಣಿಗೆಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ. ದೇವೇಗೌಡರ ಬೆನ್ನಿಗೆ ಚೂರಿ ಹಾಕೋದೆ ಆಗೋಗಿದೆ. ಜೆಡಿಎಸ್ ಹುಟ್ಟಿದಾಗಿನಿಂದ ಇದೇ ಆಗಿದೆ  ಯಾರನ್ನ ನಂಬಿರುತ್ತಾರೋ ಅವರೇ ಚೂರಿ ಹಾಕುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.madhu bangarappa- congress-mysore- former cm- hd kumaraswamy

ನಿಷ್ಟೆ ಇಲ್ಲದವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದಿಲ್ಲ. ಪಕ್ಷ ನಿಷ್ಠೆ ಇಲ್ಲದವರನ್ನ ದೂರ ಇಡಲಾಗುತ್ತದೆ.   ಜಾಕು ಹಾಕಿ ಹೋದವರಿಗೆ ಜನರೇ ಪಾಠ ಕಲಿಸುತ್ತಾರೆ. ಯಾರು ಹೊರಗೆ ಹೋಗ್ತಾರೋ ಹೋಗಬಹುದು.  ಪಕ್ಷ ಬಿಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹಳೇಬರು ಹೋದ್ರೆ ಹೊಸಬರು ಬರ್ತಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ENGLISH SUMMARY…..

‘People will teach backstabbers a lesson: Former CM HDK
Mysuru, Mar. 11, 2021 (www.justkannada.in): Former Chief Minister of Karnataka H.D. Kumaraswamy today expressed his view that many people have backstabbed H.D. Devegowda, “those he believed themselves have backstabbed him. People will all those backstabbers a lesson.”
Responding to Madhu Bangarappa joining Congress today H.D. Kumaraswamy opined that there is nothing special about Madhu Bangarappa meeting Siddaramaiah and it is an old story. I am observing this for the last year, there is no need to give much importance to this matter. Backstabbing H.D. Devegowda has become common. It has become the fate of JDS, those whom the party believed themselves have backstabbed, he alleged.
Keywords: Former Chief Minister H.D. Kumaraswamy/ JDS/ backstabbers/ people will teach a lesson

Key words: madhu bangarappa- congress-mysore- former cm- hd kumaraswamy