ಮೇಡ್ ಇನ್ ಇಂಡಿಯಾ’ ಚಿಪ್‌ ಗಳಿಂದಾಗಿ ದೇಶದಲ್ಲಿ ಇಳಿಕೆಯಾಗಲಿದೆ ಲ್ಯಾಪ್‌ ಟಾಪ್‌, ಇತರೆ ಉತ್ಪನ್ನಗಳ ಬೆಲೆ- ಅನಿಲ್ ಅಗರ್ ವಾಲ್.

ನವದೆಹಲಿ, ಸೆಪ್ಟೆಂಬರ್ 16, 2022 (www.justkannada.in): ‘ಮೇಡ್ ಇನ್ ಇಂಡಿಯಾ’ ಸೆಮಿಕಂಡಕ್ಟರ್‌ಗಳು ಬಳಕೆಗೆ ಸಿದ್ಧವಾಗಿರುವ ಉತ್ಪನ್ನಗಳ ಬೆಲೆಗಳನ್ನು ಬಹುಮಟ್ಟಿಗೆ ಕಡಿಮೆಗೊಳಿಸಲಿದೆ,” ಎಂದು ವೇದಾಂತ ಅಧ್ಯಕ್ಷ ಅನಿಲ್ ಅಗರ್‌ ವಾಲ್ ಅವರು ತಿಳಿಸಿದರು.

“ಇಂದು ಭಾರತದಲ್ಲಿ ಒಂದು ಲ್ಯಾಪ್‌ ಟಾಪ್ ಬೆಲೆ ರೂ.1 ಲಕ್ಷದವರೆಗೆ ಇದೆ. ಒಮ್ಮೆ ಗ್ಲಾಸ್ ಹಾಗೂ ಸೆಮಿಕಂಡಕ್ಟರ್ ಚಿಪ್‌ ಗಳು ನಮ್ಮಲಿ ಲಭ್ಯವಾದರೆ, ಇವುಗಳ ಬೆಲೆ ರೂ.೪೦,೦೦೦ ಅಥವಾ ಅದಕ್ಕಿಂತ ಕಡಿಮೆಯಾಗಲಿದೆ,” ಎಂದು ಮಾಧ್ಯಮವೊಂದರ ಜೊತೆ ಮಾತನಾಡುತ್ತಾ ತಿಳಿಸಿದರು.

“ಪ್ರಸ್ತುತ ತೈವಾನ್ ಹಾಗೂ ಕೋರಿಯಾ ದೇಶಗಳಲ್ಲಿ ತಯಾರಿಕೆ ಆಗುತ್ತಿರುವ ಗ್ಲಾಸ್ ಅನ್ನು ಶೀಘ್ರದಲ್ಲೇ ಭಾರತದಲ್ಲಿಯೂ ಉತ್ಪಾದಿಸಲಾಗುತ್ತದೆ,” ಎಂದು ಭಾರತದ ಅತೀ ದೊಡ್ಡ ಗಣಿಗಾರಿಕೆ ಕಂಪನಿಗಳಲ್ಲಿ ಒಂದಾಗಿರುವ ಸ್ಥಾಪಕ ಅಗರ್‌ ವಾಲ್ ಮಾಹಿತಿ ನೀಡಿದ್ದಾರೆ.

ಭವಿಷ್ಯದ ನಿರೀಕ್ಷೆಗಳ ಕುರಿತು ಮಾತನಾಡುತ್ತಾ, ಲೋಹಗಳು ಹಾಗೂ ಗಣಿಗಾರಿಕೆಯ ಈ ಉದ್ಯಮಿ, ತಮ್ಮ ಕಂಪನಿಯನ್ನು ಮಹಾರಾಷ್ಟ್ರದ ತಯಾರಿಕಾ ಕೇಂದ್ರದಲ್ಲಿಯೂ ಆರಂಭಿಸುವುದಾಗಿ ತಿಳಿಸಿದರು. ಅಲ್ಲಿ ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ ಗಳು, ಎಲಕ್ಟ್ರಿಕ್ ವಾಹನಗಳು (ಇವಿಗಳು) ಸಹ ತಯಾರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಜಂಟಿ ಉದ್ಯಮಕ್ಕೆ ಹಣ ಎಂದಿಗೂ ಒಂದು ಕೊರತೆಯಾಗುವುದಿಲ್ಲ ಎಂದೂ ತಿಳಿಸಿದರು.

“ನಮಗೆ ಹಣಕಾಸಿನ ಬೆಂಬಲ ನೀಡಲು ಬಯಸದೇ ಇರುವ ಒಂದೇ ಒಂದು ಸಂಸ್ಥೆಯೂ ಇಲ್ಲ. ಫಾಕ್ಸ್ಕಾನ್ನ್ ಸಂಸ್ಥೆ ಶೇ.೩೮ರಷ್ಟು ಈಕ್ವಿಟಿಯನ್ನು ಹೊಂದಲಿದೆ ಹಾಗೂ ಆ ಮೂಲಕ ನಮಗೆ ಹಣವನ್ನು ಒದಗಿಸಲಿದೆ,” ಎಂದು ವಿವರಿಸಿದರು.

ವೇದಾಂತ ಹಾಗೂ ತೈವಾನ್‌ ನ ಎಲೆಕ್ಟ್ರಾನಿಕ್ಸ್ ತಯಾರಿಕಾ ಕಂಪನಿಯೊಂದು ಪ್ರಧಾನಿ ನರೇಂದ್ರ ಮೋದಿಯವರ ಮಾತೃ ರಾಜ್ಯ ಗುಜರಾತ್‌ನಲ್ಲಿ ರೂ.೧.೫೪ ಲಕ್ಷ ಕೋಟಿಗಳಷ್ಟು ಅತೀ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಮಾಡಲಿದೆ. ಈ ಘಟಕ ಮುಂದಿನ ಎರಡು ವರ್ಷಗಳಲ್ಲಿ ಸಂಭವಿಸಲಿದೆ. ಈ ಜಂಟಿ ಉದ್ಯಮದಲ್ಲಿ ವೇದಾಂತು ಶೇ.೬೦ ಪಾಲುದಾರಿಕೆಯನ್ನು ಹೊಂದಲಿದ್ದು, ತೈವಾನ್‌ ನ ಚಿಪ್ ತಯಾರಿಕಾ ಕಂಪನಿ ಶೇ.೪೦ರಷ್ಟು ಪಾಲನ್ನು ಹೊಂದಲಿದೆ.

ಒಟ್ಟು ರೂ.೧.೫೪ ಲಕ್ಷ ಕೋಟಿಗಳ ಪ್ರಸ್ತಾಪಿತ ಹೂಡಿಕೆಯ ಪೈಕಿ ರೂ.೯೪,೫೦೦ ಕೋಟಿಗಳನ್ನು ಡಿಸ್‌ಪ್ಲೇ ಫ್ಯಾಬ್ರಿಕೇಷನ್ ತಯಾರಿಕಾ ಘಟಕ ಸ್ಥಾಪಿಸಲು ಬಳಸಲಾಗುವುದು. ಉಳಿದ ರೂ.೬೦,೦೦೦ ಕೋಟಿಗಳು ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್ ಹಾಗೂ ಹೊರಗುತ್ತಿಗೆ ಸೆಮಿಕಂಡಕ್ಟರ್ ಜೋಡಣೆ ಹಾಗೂ ತಪಾಸಣಾ ಘಟಕ ಸ್ಥಾಪನೆಗೆ ಉಪಯೋಗಿಸಲಾಗುವುದು.

ವೇದಾಂತ-ಫಾಕ್ಸ್ಕಾನ್ನ್ ಘಟಕ ೨೮ ನ್ಯಾನೊಮೀಟರ್‌ ಗಳ (ಎನ್‌ಎಂ) ತಂತ್ರಜ್ಞಾನ ನೋಡ್‌ ಗಳನ್ನು ಕಾರ್ಯಾಚರಣೆ ಮಾಡಲಿದ್ದು, ಡಿಸ್‌ ಪ್ಲೇ ಫ್ಯಾಬ್ರಿಕೇಷನ್ ತಯಾರಿಕಾ ಘಟನ ಜನರೇಷನ್ ೮ ಡಿಸ್‌ಪ್ಲೇಗಳನ್ನು ಉತ್ಪಾದಿಸಲಿದೆ. ಇವು ಸಣ್ಣ, ಮಧ್ಯಮ ಹಾಗೂ ದೊಡ್ಡ ಅಪ್ಲಿಕೇಷನ್‌ ಗಳ ಅಗತ್ಯಗಳನ್ನು ಪೂರೈಸಲಿದೆ ಎಂದು ಕಂಪನಿಗಳು ಹೇಳಿಕೆಯಲ್ಲಿ ತಿಳಿಸಿವೆ.

ಕಂಪನಶೀಲ ಸೆಮಿಕಂಡಕ್ಟರ್ ಪರಿಸರವ್ಯವಸ್ಥೆಯನ್ನು ಹೊಂದುವ ಭಾರತದ ಅಪೇಕ್ಷೆ, ಜಾಗತಿಕ ಮಟ್ಟದಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ದಿಗ್ಗಜ ಕಂಪನಿಗಳು ಚೀನಾದ ಹೊರಗೆ ತಮ್ಮ ಸರಬರಾಜು ಸರಪಳಿಗಳನ್ನು ವಿಸ್ತರಿಸುವ ನಿರೀಕ್ಷೆಗೆ ದೊಡ್ಡ ಮಟ್ಟದ ಚಲನೆಯನ್ನು ನೀಡಿದೆ. ಚೀನಾದಲ್ಲಿ ಈಗಲೂ ಕಠಿಣ ಕೋವಿಡ್ ನಿಯಂತ್ರಣ ನೀತಿಗಳು ಜಾರಿಯಲ್ಲಿವೆ.

ಸುದ್ದಿ ಮೂಲ: ಎಕನಾಮಿಕ್ ಟೈಮ್ಸ್

Key words: Made in India- chips-price -laptops – decrease  – Anil Agarwal