ಸಿಎಂ ಬಿಎಸ್ ವೈ ಭೇಟಿ ಮಾಡಿ ಧನ್ಯವಾದ ಅರ್ಪಿಸಿದ  ಮಾದಾರ ಚೆನ್ನಯ್ಯ ಸ್ವಾಮೀಜಿ ನೇತೃತ್ವದ ನಿಯೋಗ…

ಬೆಂಗಳೂರು,ಆ,28,2019(www.justkannada.in): ಮಾದಿಗ ಸಮುದಾಯವನ್ನ ಗುರುತಿಸಿ ಪ್ರಮುಖ ಖಾತೆ, ಡಿಸಿಎಂ ಸ್ಥಾನ ನೀಡಲಾಗಿದೆ. ಮೊದಲ ಬಾರಿಗೆ ನಮ್ಮ ಸಮುದಾಯಕ್ಕೆ . ಡಿಸಿಎಂ ಸ್ಥಾನ, ಪ್ರಭಾವಿ ಖಾತೆ ಸಿಕ್ಕಿದೆ. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾದಾರ ಚೆನ್ನಯ್ಯ ಸ್ವಾಮೀಜಿ ತಿಳಿಸಿದರು.

ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಮಾದಾರ ಚೆನ್ನಯ್ಯ ಸ್ವಾಮೀಜಿ ನೇತೃತ್ವದ ನಿಯೋಗ ಭೇಟಿ ನೀಡಿದರು. ಈ ವೇಳೆ ಡಿಸಿಎಂ ಗೋವಿಂದ ಕಾರಜೋಳ ಸಾಥ್ ನೀಡಿದರು.

ಸಿಎಂ ಭೇಟಿ ಬಳಿಕ ಮಾತನಾಡಿದ ಮಾದಾರ ಚೆನ್ನಯ್ಯ ಸ್ವಾಮೀಜಿ, ಮಾದಿಗ ಸಮುದಾಯವನ್ನ ಗುರುತಿಸಿ ಪ್ರಮುಖ ಖಾತೆ, ಡಿಸಿಎಂ ಸ್ಥಾನ ನೀಡಲಾಗಿದೆ. ಮೊದಲ ಬಾರಿಗೆ ನಮ್ಮ ಸಮುದಾಯಕ್ಕೆ ಡಿಸಿಎಂ ಸ್ಥಾನ, ಪ್ರಭಾವಿ ಖಾತೆ ಸಿಕ್ಕಿದೆ . ನಮ್ಮ ಸಮಾಜವನ್ನ ಇಲ್ಲಿಯವರೆಗೆ ರಾಜಕೀಯವಾಗಿ ಗುರುತಿಸುವಲ್ಲಿ ಸಾಧ್ಯವಾಗಿಲ್ಲ. ಆದರೆ ಯಡಿಯೂರಪ್ಪ ರವರು ಅವಕಾಶ ಕೊಟ್ಟಿದ್ದಾರೆ ಅವರಿಗೆ ಧನ್ಯವಾದ ಎಂದರು.

ಕೊಪ್ಪಳದಲ್ಲಿ ಅಸೃಶ್ಯತೆ ಜೀವಂತ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾದಾರ ಚೆನ್ನಯ್ಯ ಸ್ವಾಮೀಜಿ, ಅಸೃಶ್ಯತೆ ಇನ್ನೂ ಜೀವಂತವಾಗಿದೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಿಎಂಗೆ, ನಮ್ಮ ಸಮುದಾಯದ ಡಿಸಿಎಂ ಕಾರಜೋಳಗೆ ಆಗ್ರಹ ಮಾಡ್ತೇವೆ. ಮೊದಲಿಗೆ ಹೋಲಿಸಿದರೆ ಅಸ್ಪೃಶ್ಯತೆ ಇಂದು ಕಡಿಮೆ ಆಗಿದೆ. ಸಾವಿರಾರು ವರ್ಷದಿಂದ ನಡೆದುಬಂದ ಪದ್ದತಿ ತಕ್ಷಣಕ್ಕೆ ನಿರ್ಮೂಲನೆ ಮಾಡೋದು ಕಷ್ಟ . ಮುಂದಿನ ದಿನಗಳಲ್ಲಿ ಸರಿ ಹೋಗುತ್ತೆ ಎಂಬ ವಿಶ್ವಾಸ ಇದೆ ಎಂದರು.

Key words: Madar Chenniah Swamiji- delegation – visited – thanked -CM BS yeddyurappa