ಎಂ.ಟೆಕ್‍ ಇನ್ ಟೂಲ್ ಇಂಜಿನೀಯರಿಂಗ್ ಕೋರ್ಸ್ : PG CET ಬರೆಯದೆ ಇರುವ ವಿದ್ಯಾರ್ಥಿಗಳ  ಪ್ರವೇಶಕ್ಕೆ ಅವಕಾಶ.

Promotion

ಮೈಸೂರು,ಅಕ್ಟೋಬರ್,30,2023(www.justkannada.in): ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಮೈಸೂರು ಇಲ್ಲಿ 2022-23ನೇ ಸಾಲಿನ ಎಂ.ಟೆಕ್ ಇನ್ ಟೂಲ್ ಇಂಜೀನಿಯರಿಂಗ್ ಕೋರ್ಸ್ ಗಾಗಿ PG CET ಬರೆಯದೆ ಇರುವ  ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ಕಲ್ಪಿಸಿದೆ.

PGCET  ಬರೆಯದೇ ಇರುವ ಬಿ.ಇ. – ಮೆಕ್ಯಾನಿಕಲ್/ ಇಂಡಸ್ಟ್ರೀಯಲ್ ಪ್ರೋಡಕ್ಷನ್/ ಆಟೋ ಮೊಬೈಲ್/ಆಟೋಮೇಷನ್ ಮತ್ತು ರೋಬೋಟಿಕ್ಸ್‍  ಇಂಜಿನಿಯರಿಂಗ್ ಮುಂತಾದವುಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಎ.ಐ.ಸಿ.ಟಿ.ಇ ಮತ್ತು ವಿ.ಟಿ.ಯುನಿಂದ ಅನುಮೋದನೆ ಪಡೆದ ಎರಡು ವರ್ಷ ಅವಧಿಯ ಎಂ.ಟೆಕ್ ಇನ್ ಟೂಲ್ ಇಂಜಿನೀಯರಿಂಗ್ ಕೋರ್ಸ್ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಸಂಸ್ಥೆಯಲ್ಲಿ ಕೈಗಾರಿಕಾ ಘಟಕವಿರುವುದರಿಂದ ವಿದ್ಯಾರ್ಥಿಗಳಿಗೆ ಸಿಎನ್‍ ಸಿ ಯಂತ್ರದಲ್ಲಿ, ರೊಬೋಟಿಕ್ಸ್ ಹಾಗೂ 3ಡಿ ಪ್ರಿಂಟಿಂಗ್‍ ನಲ್ಲಿ ಕೆಲಸ ಮಾಡಬಹುದಾಗಿದ್ದುಇದಕ್ಕೆ ಬೇಕಾದಂತಹ ನೂತನ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳು ಲಭ್ಯವಿದೆ.

ನಮ್ಮ ಸಂಸ್ಥೆಯ ವತಿಯಿಂದ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಗುವುದು ಮತ್ತು ಇಲ್ಲಿಯವರೆಗೆ ಎಲ್ಲಾ ಪಾಸಾದಂತಹ ವಿದ್ಯಾರ್ಥಿಗಳಿಗೆ ಉದ್ಯೋಗವು ಲಭಿಸಿದೆ ಎಂದು ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂರ್ಪಕಿಸಿ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ. 93 ಮತ್ತು 94, ಬೆಳಗೊಳ ಕೈಗಾರಿಕಾ ಪ್ರದೇಶ, ಕೆ.ಆರ್.ಎಸ್ ರಸ್ತೆ, ಮೈಸೂರು – 16. ಮೊಬೈಲ್ ನಂ : 8095978954, 9141630306, 9449929667, 9141630303, 8050325552.

Key words: M.Tech in Tool Engineering –Course- Admission – students-mysore