ಲಾರಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ದುರ್ಮರಣ.

Promotion

ಚಿತ್ರದುರ್ಗ,ಫೆಬ್ರವರಿ,3,2022(www.justkannada.in):  ನಿಂತಿದ್ಧ ಲಾರಿಗೆ ಕಾರು ಡಿಕ್ಕಿಯಾಗಿ  ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಚಿತ್ರದುರ್ಗ- ಹಿರಿಯೂರು ನಡುವಿನ ಗುಯಿಲಾಳು ಟೋಲ್‌ನಲ್ಲಿ ಈ ಘಟನೆ ನಡೆದಿದೆ. ಬೆಳಗಾವಿ ಮೂಲದ ರಮೇಶ್,(55) ವಿಶ್ವನಾಥ್,(65) ಮತ್ತು ಸೀಮಾ(45) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಬೆಳಗಾವಿಯಿಂದ ಬೆಂಗಳೂರು ಕಡೆಗೆ ತೆರಳುವಾಗ ಈ ಘಟನೆ ನಡೆದಿದೆ.

ಕಾರು ಡಿಕ್ಕಿಯಾಗುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಐಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: lorry-car-accident-death