ಲಾಕ್ ಡೌನ್ ಹಿನ್ನೆಲೆ: ಮೈಸೂರಿನಲ್ಲಿ ಮದ್ಯಕೊಳ್ಳಲು ಸಾಲುಗಟ್ಟಿ ನಿಂತ ಮದ್ಯಪ್ರಿಯರು..

ಮೈಸೂರು,ಏಪ್ರಿಲ್,26,2021(www.justkannada.in):  ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ನಾಳೆಯಿಂದ ಲಾಕ್ ಡೌನ್ ಜಾರಿಯಾಗಲಿದ್ದು ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮದ್ಯಪ್ರಿಯರು ಮದ್ಯಕೊಳ್ಳಲು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿದೆ.jk

ಮೈಸೂರಿನ ಬಾರ್ ಗಳಲ್ಲಿ  ಮದ್ಯಕೊಳ್ಳಲು ಮದದ್ಯಪ್ರಿಯರು ದುಂಬಾಲು ಬಿದ್ದಿದ್ದು, ತಮಗೆ ಬೇಕಾದ ಬ್ರ್ಯಾಂಡ್ ಗಳನ್ನ ಎಣ್ಣೆಪ್ರೇಮಿಗಳು ಹೊತ್ತೊಯ್ಯುತ್ತಿದ್ದಾರೆ. ನಾಳೆ ಲಾಕ್ ಡೌನ್ ಆದರೇ ಮದ್ಯ ಸಿಗದ ಆತಂಕ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ  ಮದ್ಯಕೊಳ್ಳಲು ಮೈಸೂರಿನ ಬಾರ್ ಗಳಲ್ಲಿ ಮದ್ಯಪ್ರಿಯರು ಸಾಲುಗಟ್ಟಿ ನಿಂತಿದ್ದಾರೆ

ಸಾಮಾಜಿಕ ಅಂತರ, ಮಾಸ್ಕ್​ ಸೇರಿದಂತೆ ಕೊರೊನಾ ನಿಯಮಗಳನ್ನ ಗಾಳಿಗೆ ತೂರಿ ಬೈಕ್ ಗಳ ಡಿಕ್ಕಿಯಲ್ಲಿ ಬಾಟಲ್ ಮೇಲೆ ಬಾಟಲ್ ತುಂಬಿಕೊಂಡು  ಹೋಗುತ್ತಿದ್ದಾರೆ.  ಲಾಕ್ ಡೌನ್ ಆದ್ರೆ ಬಾರ್ ಬಂದ್ ಭಯದಲ್ಲಿ ಸ್ಟಾಕ್ ಮಾಡಿಕೊಳ್ಳುವತ್ತ ಗಮನ ಹರಿಸಿದ್ದು ತರಕಾರಿ, ದಿನಸಿ, ಔಷಧಿಯಂತಹ ಅಗತ್ಯ ವಸ್ತುಗಳ ಬಗ್ಗೆ ಚಿಂತೆ ಬಿಟ್ಟು ಮದ್ಯಪ್ರಿಯರಿಗೆ ಮದ್ಯವೇ ಸರ್ವಸ್ವವಾಗಿದೆ. ಇನ್ನು ಕಳೆದ ಬಾರಿ ಲಾಕ್ ಡೌನ್ ಮಾಡಿದ್ದ ಸಂದರ್ಭ ತಿಂಗಳು ಕಾಲ ಮದ್ಯದಂಗಡಿ ಬಂದ್ ಆಗಿತ್ತು.

Key words: Lockdown –people- in front – liquor stores -Mysore.