ಬ್ರಿಟನ್ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ: ರಿಶಿ ಸುನಕ್ ಗೆ ತಪ್ಪಿದ ಅವಕಾಶ.

Promotion

ಲಂಡನ್,ಸೆಪ್ಟಂಬರ್,5,2022(www.justkannada.in): ಬ್ರಿಟನ್ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆಯಾಗಿದ್ದು ಪ್ರಧಾನಿ ಹುದ್ಧೆಗೆ ಪ್ರಬಲ ಸ್ಪರ್ಧಿಯಾಗಿದ್ದ ಭಾರತೀಯ ಮೂಲದ ರಿಶಿ ಸುನಕ್ ಅವರಿಗೆ ಅವಕಾಶ ಕೈತಪ್ಪಿದೆ.

ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಲಿಜ್ ಟ್ರಸ್ ನಾಳೆ  ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಸಂಸದೆಯಾಗಿರುವ ಲಿಜ್ ಟ್ರಸ್ 81,326 ಮತಗಳನ್ನ ಪಡೆದು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಕೊನೆ ಹಂತದಲ್ಲಿ ರಿಶಿ ಸುನಕ್  ಅವರಿಗೆ ಪ್ರಧಾನಿ ಪಟ್ಟ ಕೈತಪ್ಪಿದೆ.  ಪ್ರಬಲ ಸ್ಪರ್ಧೆಯೊಡ್ಡಿದ್ಧ ರಿಶಿ ಸುನಕ್ ಅವರಿಗೆ 60,399 ಮತಗಳು ಲಭಿಸಿವೆ. ರಿಶಿ ಸುನಕ್ ಅವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ್ ಮೂರ್ತಿ ಅವರ ಅಳಿಯ ಆಗಿದ್ದಾರೆ.

Key words: Liz Truss – Britain –new- Prime Minister- missed -opportunity – Rishi Sunak.