‘ಜೀವಂತ ಸಿದ್ದರಾಮಯ್ಯನೇ ನಮಗೆ ಬೇಕಿಲ್ಲ, ಅವರ ಹೆಣ ತೆಗೆದುಕೊಂಡು ಏನು ಮಾಡೋಣ..? ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ.

Promotion

ಶಿವಮೊಗ್ಗ,ಜನವರಿ,31,2023(www.justkannada.in): ತಮ್ಮ ಹೆಣ ಕೂಡ ಬಿಜೆಪಿ ಪಕ್ಷಕ್ಕೆ ಹೋಗೋದಿಲ್ಲ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ತಿರುಗೇಟು ನೀಡುವ ಭರದಲ್ಲಿ  ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಕೆ.ಎಸ್ ಈಶ್ವರಪ್ಪ, ‘ಜೀವಂತ ಸಿದ್ದರಾಮಯ್ಯನೇ ನಮಗೆ ಬೇಕಿಲ್ಲ, ಅವರ ಹೆಣ ತೆಗೆದುಕೊಂಡು ಏನು ಮಾಡೋಣ? ನಾಯಿಯೂ ಕೂಡ ಅವರ ಹೆಣ ಮೂಸಿ ನೋಡೋದಿಲ್ಲ ಎಂದು ಹೇಳಿದರು.

ಬಿಜೆಪಿ  ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್  ಅವರನ್ನ ಬಫೂನ್ ಎಂದು ಕರೆದ ಸಿದ್ಧರಾಮಯ್ಯ ವಿರುದ್ಧ ಸಿಡಿಮಿಡಿಗೊಂಡ ಶಾಸಕ ಕೆ ಎಸ್ ಈಶ್ವರಪ್ಪ, ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಯೊಬ್ಬರು ಒಂದು ಪಕ್ಷದ ಅಧ್ಯಕ್ಷರ ಬಗ್ಗೆ ಅಂಥ ಪದಗಳನ್ನು ಬಳಸುವುದು ಆವರ ಘನತೆಗೆ ಶೋಭೆ ನೀಡೋದಿಲ್ಲ. ತಮ್ಮ ಸ್ಥಾನದ ಗೌರವ ಉಳಿಸಿಕೊಳ್ಳುವುದು ಅವರ ಜವಾಬ್ದಾರಿ. ಮತ್ತೆ ಆ ಪದ ಬಳಕೆ ಮಾಡಿದರೇ ನಾವು ಆ ರೀತಿ ಉತ್ತರಿಸಬೇಕಾಗುತ್ತೆ ಎಂದರು .

Key words: living- Siddaramaiah,-bjp- Former minister- KS Eshwarappa.