ಮಾ.3 ರಂದು ಮೈಸೂರಿನ ಐಶ್(AIISH)ನಲ್ಲಿ ‘ನೇರ ಫೋನ್ ಇನ್’ ಕಾರ್ಯಕ್ರಮ….

Promotion

ಮೈಸೂರು,ಮಾರ್ಚ್,1,2021(www.justkannada.in):  ಮಾರ್ಚ್ 3 ರಂದು ವಿಶ್ವ ಶ್ರವಣ ದಿನಾಚಾರಣೆಯ ಅಂಗವಾಗಿ ಮೈಸೂರಿನ ಅಖಿಲ ಭಾರತ್ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ನೇರ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.jk

ಮಾರ್ಚ್ 3 ರಂದು ಮಧ್ಯಾಹ್ನ 2 ಗಂಟೆಯಿಂದ 3ಗಂಟೆವರೆಗೆ ನೇರ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಶ್ರವಣ ದೋಷ, ಕಿವಿ ಕೇಳಿಸುವಿಕೆಯಲ್ಲಿ ತೊಂದರೆ, ಕಿವಿ ಸೋರುವಿಕೆ, ಕಿವಿಯಲ್ಲಿ ಮೊರೆತ, ಇಂತಹ ತೊಂದರೆಗಳಿದ್ದರೆ  ಆ ದಿನದಂದು ದೂರವಾಣಿ ಮೂಲಕ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು.live phone-in -program – mysore-AIISH  march 3

ಈ ಸಂದರ್ಭದಲ್ಲಿ  ಇಎನ್ ಟಿ ತಜ್ಞರಾದ ಡಾ. ಜಿ.ರಾಜೇಶ್ವರಿ,  ಶ್ರವಣ ವಿಜ್ಞಾನ ತಜ್ಞರಾದ ಪ್ರೊ. ಯು. ಅಜಿತ್ ಕುಮಾರ್ ಹಾಗೂ ಸಂವಹನ ನ್ಯೂನ್ಯತೆಯುಳ್ಳ ವ್ಯಕ್ತಿಗಳಿಗೆ ಟೆಲಿಕೇಂದ್ರದ ಮುಖ್ಯಸ್ಥರಾದ ಡಾ.ಜಯಶ್ರೀ. ಸಿ. ಶಾನ್ ಬಾಳ್ ಭಾಗವಹಿಸಲಿದ್ದಾರೆ.

ಸಾರ್ವಜನಿಕರು ‘0821-2502530’ ಈ ನಂಬರ್ ಗೆ ಕರೆ ಮಾಡಿ ಸಂಪರ್ಕಿಸಬಹುದು.

Key words:  live phone-in -program – mysore-AIISH  march 3