ಎರಡು ಹಂತಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಕೆಲವೇ ಕ್ಷಣಗಳಲ್ಲಿ ರಿಲೀಸ್- ಸಿಎಂ ಬಸವರಾಜ ಬೊಮ್ಮಾಯಿ.

Promotion

ನವದೆಹಲಿ,ಏಪ್ರಿಲ್ ,11,2023(www.justkannada.in): ಎರಡು ಹಂತಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಕೆಲವೇ ಕ್ಷಣಗಳಲ್ಲಿ ಪಟ್ಟಿ ರಿಲೀಸ್ ಆಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ನವದೆಹಲಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಮಿತ್ ಶಾ ಜೊತೆ ಚರ್ಚಿಸಿದ ಬಳಿಕ ಪಟ್ಟಿ ಬಿಡುಗಡೆಯಾಗಲಿದೆ. ವರಿಷ್ಠರು ಶೀಘ್ರದಲ್ಲೇ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಇನ್ನೆರಡು ಗಂಟೆ ತಡೆಯಿರಿ ಎಲ್ಲವೂ ಗೊತ್ತಾಗುತ್ತದೆ. ನಾವು ಮಾಡಿದ ಕೆಲಸದ ಆಧಾರದ ಮೇಲೆ ಜನರ ಬಳೀ ಹೋಗುತ್ತೇವೆ ಎಂದರು.

ಚುನಾವಣಾ ರಾಜಕಾರಣಕ್ಕೆ ಕೆ.ಎಸ್ ಈಶ್ವರಪ್ಪ ನಿವೃತ್ತಿ ಘೋಷಣೆ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೆ.ಎಸ್ ಈಶ್ವರಪ್ಪಇನ್ನೂ ಕೆಲ ವರ್ಷಗಳ ಕಾಲ ರಾಜಕೀಯದಲ್ಲಿ ಇರಬೇಕು. ಈಶ್ವರಪ್ಪ ಸ್ವ ಇಚ್ಛೆಯಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ಜತೆಗೂ  ನಾನು ಮಾತನಾಡಿದ್ದೇನೆ. ರಾಜಕಾರಣದಲ್ಲಿ ಇರುತ್ತೇನೆ ಎಂದು ತಿಳಿಸಿದ್ದಾರೆ. ಶೆಟ್ಟರ್ ಪ್ರಸ್ತಾಪವನ್ನ ವರಿಷ್ಠರಿಗೆ ತಿಳಿಸಿದ್ದೇನೆ. ಕೆಲವು ಹಿರಿಯ ನಾಯಕರು ನಿವೃತ್ತಿ ಘೋಷಣೆ ಮಾಡಿದ್ದಾರೆ. ನಿವೃತ್ತಿ ಘೋಷಿಸಿದ ಕಡೆ ಅಭ್ಯರ್ಥಿಗಳು ಬದಲಾವಣೆಯಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words:  list – BJP candidates- will – released – two phases- CM- Basavaraja Bommai.