ಒಂದು ಜಾತಿಯಿಂದ ದೇಶ ಕಟ್ಟಲು ಆಗಲ್ಲ: ಎಲ್ಲರೂ ಸೇರಿದರೇ ಮಾತ್ರ ಅಭಿವೃದ್ಧಿ ಸಾಧ್ಯ-ಮಲ್ಲಿಕಾರ್ಜುನ ಖರ್ಗೆ.

Promotion

ಚಿಕ್ಕಮಗಳೂರು,ಏಪ್ರಿಲ್,24,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಿರುವ ಸಮಯದಲ್ಲೇ ಲಿಂಗಾಯತ ಸಿಎಂ ವಿಚಾರ ಭಾರಿ ಚರ್ಚೆಯಾಗುತ್ತಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾದ ವಾಗ್ವಾದಗಳು ನಡೆಯುತ್ತಲೇ ಇವೆ. ಈ ಕುರಿತು ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಒಂದು ಜಾತಿಯಿಂದ ದೇಶ ಕಟ್ಟಲು ಆಗಲ್ಲ: ಎಲ್ಲರೂ ಸೇರಿದರೇ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಒಂದೇ ಜಾತಿ ಧರ್ಮದವರು ಎಲ್ಲಾ ಪಕ್ಷದಲ್ಲೂ ಇರ್ತಾರೆ.  ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋದರೇ ಮಾತ್ರ ಅಭಿವೃದ್ದಿಗೆ ಪೂರಕ ಎಂದರು.

ಕಾಂಗ್ರೆಸ್ ಗೆ ಚಿಕ್ಕಮಗಳೂರು ಲಕ್ಕಿಜಿಲ್ಲೆ ಇಂದಿರಾಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಬಂದಿದ್ದವು.  ಆ ಚುನಾವಣೆ ಗೆದ್ದ ಮೇಲೆ ದೇಶದ ಚಿತ್ರಣವೇ ಬದಲಾಯಿತು. 80 ಜನರಲ್ ಎಲೆಕ್ಷನ್ ಇಡೀ ದೇಶದಲ್ಲಿ ಮೆಜಾರಿಟಿ ಬಂತು. ದೇಶದ ಚಿತ್ರಣ ಬದಲು ಮಾಡಿವ ಶಕ್ತಿ ನೀಡಿದ್ದು ಕಾಂಗ್ರೆಸ್  ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Key words: Lingayath-CM-AICC-president-Mallikarjuna kharge