ನಾನು ಸುಳ್ಳು ಹೇಳಿದ್ರೂ ಸಿಎಂ ಬಿ.ಎಸ್. ಯಡಿಯೂರಪ್ಪ ಸುಳ್ಳು ಹೇಳಲು ಸಾಧ್ಯವೇ..?- ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್

Promotion

ಬೆಂಗಳೂರು,ನ,19,2019(www.justkannada.in):  ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶರತ್ ಬಚ್ಚೇಗೌಡ ವಿರುದ್ದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್  ಕಿಡಿಕಾರಿದ್ದಾರೆ.

ಅಪ್ಪ ಮಗ ಒಪ್ಪಿದ ಮೇಲೆಯೇ ನಾನು ರಾಜೀನಾಮೆ ನೀಡಿದ್ದೆ. ನಾನು ಸುಳ್ಳು ಹೇಳಿದ್ರೂ ಸಿಎಂ ಬಿಎಸ್ ಯಡಿಯೂರಪ್ಪ ಸುಳ್ಳು ಹೇಳಲು ಸಾಧ್ಯವೆ ಎಂದು ಎಂಟಿಬಿ ನಾಗರಾಜ್  ಹೇಳಿಕೆ ನೀಡಿದ್ದಾರೆ.

ಮಾಧ್ಯಮದ ಜತೆ ಇಂದು ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್, ಶರತ್ ಬಚ್ಚೇಗೌಡ ಆಟ ತೋರಿಸುತ್ತಿದ್ದಾರೆ. ಅವರ ತಂದೆ ಬಿ.ಎನ್ .ಬಚ್ಚೇಗೌಡರಿಗೆ ಗೊತ್ತಿಲ್ಲದೇ, ಇಂತಹ ಆಟ ಆಡಲು ಸಾಧ್ಯನಾ ಎಂದು ಪ್ರಶ್ನಿಸಿದ್ದಾರೆ.

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಸ್ಪರ್ಧೆ ಮಾಡುವುದಿಲ್ಲ ಎಂದು ಒಪ್ಪಿಕೊಂಡ ಬಳಿಕವೇ ನಾನು ರಾಜೀನಾಮೆ ನೀಡಿದೆ. ನಾನು ಸುಳ್ಳು ಹೇಳಿದರೂ ಸಿಎಂ ಬಿ.ಎಸ್. ಯಡಿಯೂರಪ್ಪ ಸುಳ್ಳು ಹೇಳಲು ಸಾಧ್ಯನಾ ಎಂದು ಎಂಟಿಬಿ ನಾಗರಾಜ್ ಶರತ್ ಬಚ್ಚೇಗೌಡ ವಿರುದ್ದ  ವಾಗ್ದಾಳಿ ನಡೆಸಿದರು.

Key words: lied -CM -B.S yeddyurappa  -bjp candidate –MTB nagaraj-sharath bacchegowda