ಆರ್‌ಎಸ್‌ಎಸ್‌ ಕುರಿತು ಹೇಳಿಕೆ ನೀಡುವ ಮೊದಲು ನಾಲಿಗೆ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಿ- ಸಿದ್ಧರಾಮಯ್ಯ ವಿರುದ್ಧ ಬಿಎಸ್ ವೈ ಕಿಡಿ.

Promotion

ಶಿವಮೊಗ್ಗ,ಅಕ್ಟೋಬರ್,19,2021(www.justkannada.in): ಪ್ರಧಾನಿ  ಮೋದಿ ಮತ್ತು ಆರ್‌ಎಸ್‌ಎಸ್‌ ಕುರಿತು ಹೇಳಿಕೆ ನೀಡುವ ಮೊದಲು ಸಿದ್ದರಾಮಯ್ಯ ನಾಲಿಗೆ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಿ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದರು.

ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಬಿಜೆಪಿ ತಮ್ಮನ್ನು ಕಡೆಗಣಿಸಿಲ್ಲ. ‘ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಯಾವ ಮುಖಂಡರೂ ಕಡೆಗಣಿಸಿಲ್ಲ. ಯಾರ ಒತ್ತಡವೂ ನನ್ನ ಮೇಲಿಲ್ಲ.ಕಣ್ಣೀರು ಹಾಕಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಅದು ಸ್ವಯಂ ತೆಗೆದುಕೊಂಡ ನಿರ್ಧಾರ ಎಂದು ಸ್ಪಷ್ಟನೆ ನೀಡಿದರು.

ಹಾಗೆಯೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ತಕ್ಕಂತೆ  ಸಿದ್ಧರಾಮಯ್ಯ ನಡೆದುಕೊಳ್ಳಲಿ. ಇಲ್ಲದಿದ್ದರೆ ಜನರು ತಕ್ಕಪಾಠ ಕಲಿಸುವರು ಎಂದು  ಎಚ್ಚರಿಕೆ ನೀಡಿದರು.

ಸಿಂದಗಿ, ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವರು. ಅ.20, 21ರಂದು ಸಿಂದಗಿ, 22, 23ರಂದು ಹಾನಗಲ್‌ನಲ್ಲಿ ಪ್ರಚಾರ ನಡೆಸುವೆ. ಅಗತ್ಯವಿದ್ದರೆ ಹಾನಗಲ್‌ ನಲ್ಲಿ ಹೆಚ್ಚುವರಿಯಾಗಿ ಒಂದು ದಿನ ಪ್ರಚಾರ ಕೈಗೊಳ್ಳುವೆ  ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು.

Key words: Let’s -keep – tongue – statement – RSS- Siddaramaiah –former CM- BS yeddyurappa