ಹಬ್ಬಗಳ ಋತು ನೀರಿನ ಸಂರಕ್ಷಣೆ ಸಂದೇಶ ಸಾರಲಿ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ನವದೆಹಲಿ, ಜುಲೈ 28,2019(www.justkannada.in): ಹಬ್ಬಗಳ ಋತುವನ್ನು ನೀರಿನ ಸಂರಕ್ಷಣೆಯ ಸಂದೇಶವನ್ನು ಸಾರಲು ಏಕೆ ಬಳಸಿಕೊಳ್ಳಬಾರದು ಎಂದು ಪ್ರಧಾನ ಮಂತ್ರಿ ದೇಶದ ಜನರನ್ನು ಪ್ರಶ್ನಿಸಿದ್ದಾರೆ.

ಮನ್ ಕಿ ಬಾತ್ ನಲ್ಲಿ ಇಂದು ಮಾತನಾಡಿದ ಪ್ರಧಾನಿ, ಜಲ ನೀತಿಯನ್ನು ರೂಪಿಸಿದ ಮೊದಲ ರಾಜ್ಯ ಮೇಘಾಲಯ. ಇದಕ್ಕಾಗಿ ನಾನು ಮೇಘಾಲಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನೀರಿನ ಸಮಸ್ಯೆಯಿರುವ ಹರ್ಯಾಣದಂತಹ ರಾಜ್ಯಗಳಲ್ಲಿ ಅಲ್ಪ ನೀರಿನ ಅವಶ್ಯಕತೆಯಿರುವ ಬೆಳೆ ಬೆಳೆಯಲು ಜನರನ್ನು ಉತ್ತೇಜಿಸಲಾಗುತ್ತದೆ ಎಂದಿದ್ದಾರೆ.

ಈ ಮೂಲಕ ರೈತರು ನೀರಿನ ಕೊರತೆಯಿಂದ ಬೆಳೆ ನಷ್ಟ ಹೊಂದುವುದನ್ನು ತಪ್ಪಿಸಬಹುದು. ಅಂತರಿಕ್ಷ ಯಾನದಲ್ಲಿ ಆಕಾಶಕ್ಕಿಂತ ಮಿಗಿಲಾಗಿ ಭಾರತ ಸಾಧನೆ ಮಾಡುತ್ತಿದ್ದು ಈ ವಿಚಾರದಲ್ಲಿ ಭಾರತೀಯರೆಲ್ಲರೂ ಹೆಮ್ಮೆ ಪಡುತ್ತಾರೆ ಎಂಬ ಬಲವಾದ ನಂಬಿಕೆ ನನಗಿದೆ ಎಂದರು.