ಮೈಸೂರಿನ ಸಿ.ಎಫ್.ಟಿ.ಆರ್.ಐ ಆವರಣದಲ್ಲಿ ಚಿರತೆ ಪ್ರತ್ಯಕ್ಷ.

Promotion

ಮೈಸೂರು,ಜನವರಿ,4,2023(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನ ಸಿ.ಎಫ್.ಟಿ.ಆರ್.ಐ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲಿನ ಜನರಲ್ಲಿ ಆತಂಕ ಮನೆ ಮಾಡಿದೆ.

ಸಿಎಫ್ ಟಿ ಆರ್ ಐ ನ ಆವರಣದಲ್ಲಿರುವ ಶಾಲೆಯ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆಯನ್ನು ನೋಡುತ್ತಿದ್ದಂತೆ ಎಚ್ಚೆತ್ತ ಶಿಕ್ಷಕರು. ಎಲ್ಲ ಮಕ್ಕಳನ್ನು ವಾಪಸ್ ಮನೆಗೆ ಕಳುಹಿಸಿದರು. ಇದೀಗ ಸಿ ಎಫ್‌ ಟಿ ಆರ್ ಐ ಆವರಣದಲ್ಲಿ ಆತಂಕ ಶುರುವಾಗಿದ್ದುಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದಾಗಿದ್ದಾರೆ.

ಚಿರತೆ ಪ್ರತ್ಯೆಕ್ಷದಿಂದಾಗಿ ಸಿ ಎಫ್ ಟಿ ಆರ್ ಐ ಗೆ ಸನಿಹದಲ್ಲಿರುವ ಒಂಟಿಕೊಪ್ಪಲು ಪಡುವಾರಹಳ್ಳಿ ‌ನಿವಾಸಿಗಳಲ್ಲೂ ಆತಂಕ ಮನೆ ಮಾಡಿದೆ.

Key words: Leopard- spotted -CFTRI – Mysore.