ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ ಮರಿಗಳು.

Promotion

ಮೈಸೂರು,ಡಿಸೆಂಬರ್,5,2021(www.justkannada.in): ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ ಚಿರತೆ ಮರಿಗಳು ಸೆರೆಯಾಗಿವೆ.

ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಮರಿಗಳು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿವೆ. ಚಿರತೆ ಮರಿಗಳ ಸೆರೆಯಿಂದ ಬೀಚನಹಳ್ಳಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ಕೆಲ ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆ ಮರಿಗಳು ಉಪಟಳ ನೀಡುತ್ತಿದ್ದವು. ನಾಲ್ಕು ಮೇಕೆಗಳನ್ನ ಚಿರತೆ ಮರಿಗಳು ತಿಂದುಹಾಕಿದ್ದವು. ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯ ಇಲಾಖೆ ಬೋನ್ ಇರಿಸಿತ್ತು. ಗ್ರಾಮದ ನೀರಾವರಿ ಇಲಾಖೆಯ ಪಾಳುಬಿದ್ದ ವರ್ಕ್ ಶಾಪ್ ನಲ್ಲಿ ಬೋನ್ ಅಳವಡಿಕೆ ಮಾಡಲಾಗಿತ್ತು. ಬೋನ್ ಗೆ ಎರಡು ಚಿರತೆ ಮರಿಗಳು ಬಿದ್ದಿದ್ದು, ಚಿರತೆ ಮರಿಗಳನ್ನ ಸುರಕ್ಷಿತ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ರವಾನಿಸಿದ್ದಾರೆ.

Key words: Leopard -cubs – bone -Forest Department.