ಕೋಳಿ ತಿನ್ನಲು ಫಾರ್ಮ್ ಗೆ ಬಂದ ಚಿರತೆ ಸೆರೆ.

Promotion

ಮೈಸೂರು,ಅಕ್ಟೋಬರ್,19,2021(www.justkannada.in): ಮೈಸೂರು ತಾಲೂಕಿನ ಜಯಪುರ ಗ್ರಾಮದಲ್ಲಿ ಕೋಳಿ ಫಾರ್ಮ್​ ಗೆ ಲಗ್ಗೆ ಇಟ್ಟು ಕೋಳಿ ತಿಂದ ಚಿರತೆ ಕೊನೆಗೂ ಸೆರೆಯಾಗಿದೆ.
ಜಯಪುರದ ಮೂಡೆಗೌಡ ಎಂಬವರ ಕೋಳಿ ಫಾರ್ಮ್ ನಲ್ಲಿ ಚಿರತೆ ಸೆರೆಯಾಗಿದೆ.

ಜಯಪುರ ಗ್ರಾಮದ ರೈತ ಬಸಪ್ಪ ಅವರು ತಮ್ಮ ತೋಟದ ಮನೆಯಲ್ಲಿ ಫಾರ್ಮ್​ನಲ್ಲಿ ಕೋಳಿ ಸಾಕಿದ್ದರು. ಈ ಫಾರ್ಮ್​ಗೆ ಸೋಮವಾರ ರಾತ್ರಿ ಆಗಮಿಸಿದ ಚಿರತೆ ಕೋಳಿಗಳನ್ನು ತಿಂದು ಆರಾಮಾಗಿ ಫಾರ್ಮ್ ನಲ್ಲೇ ರಾತ್ರಿ ಉಳಿದಿದೆ.

ಬೆಳಗಿನ ಜಾವ 4.45ರ ವೇಳೆಗೆ ಕೋಳಿಗಳನ್ನು ನೋಡಲು ಬಸಪ್ಪ ಫಾರ್ಮ್​ಗೆ ಆಗಮಿಸಿ ಟಾರ್ಚ್ ಬಿಟ್ಟ ಸಂದರ್ಭ ಚಿರತೆ ಘರ್ಜಿಸಿತು. ತಕ್ಷಣ ಬಾಗಿಲು ಹಾಕಿದ ಬಸಪ್ಪ ಅವರು ಚಿರತೆ ಹೊರ ಹೋಗದಂತೆ ನೋಡಿಕೊಂಡರು.

ಚಿರತೆ ಕೋಳಿ ಫಾರ್ಮ್​ನಲ್ಲಿರುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದು,  ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.

Key words: leopard – came – farm -eat –hen-mysore