ಉಪಸಭಾಪತಿ ಮೇಲೆ ಹಲ್ಲೆ ನಡೆಸಿ ದಾಂಧಲೆ: ಇಂತಹ ದುರ್ಘಟನೆಗಳಿಗೆ ಇನ್ನಾದರೂ ಅಂತ್ಯ ಹೇಳಿ –ಕಾಂಗ್ರೆಸ್ ಗೆ ಡಿಸಿಎಂ ಲಕ್ಷ್ಮಣ್ ಸವದಿ ಚಾಟಿ…

Promotion

ಬೆಂಗಳೂರು,ಡಿಸೆಂಬರ್,15,2020(www.justkannada.in): ವಿಧಾನಪರಿಷತ್ತಿನಲ್ಲಿ ಇಂದು ಕಲಾಪ ಪ್ರಾರಂಭವಾಗುವ ಸಂದರ್ಭದಲ್ಲಿ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‍ನ ಕೆಲವು ಸದಸ್ಯರು ಸಭಾಪತಿಯವರ ಪೀಠಕ್ಕೆ ನುಗ್ಗಿ, ಉಪ ಸಭಾಪತಿಯವರ ಮೇಲೆ ಹಲ್ಲೆ ನಡೆಸಿ ದಾಂಧಲೆ ಎಬ್ಬಿಸಿರುವುದು ನಿಜಕ್ಕೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಕಪ್ಪು ಚುಕ್ಕೆಯಾಗಿದೆ.  ಇಂತಹ ದುರ್ಘಟನೆಗಳಿಗೆ ಇನ್ನಾದರೂ ಅಂತ್ಯ ಹೇಳಿ ಎಂದು ನಾನು ಕಾಂಗ್ರೆಸ್ ಪಕ್ಷದವರಲ್ಲಿ ಕೋರುತ್ತೇನೆ ಎಂದು ಕಾಂಗ್ರೆಸ್ ನಾಯಕರಿಗೆ ಡಿಸಿಎಂ ಲಕ್ಷ್ಮಣ್ ಸವದಿ ಚಾಟಿ ಬೀಸಿದ್ದಾರೆ.I didn't knew CM BSY will think so cheaply - KPCC President D.K. Shivakumar

ವಿಧಾನ ಪರಿಷತ್ ಕಲಾಪ ವೇಳೆ ಗಲಾಟೆ ಗದ್ಧಲ, ಉಪಸಭಾಪತಿ ಅವರನ್ನ ಕಾಂಗ್ರೆಸ್ ಸದಸ್ಯರು ಎಳೆದಾಡಿದ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಲಕ್ಷ್ಮಣ್ ಸವದಿ,   ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ವಿರೋಧ ಪಕ್ಷಗಳಿಗೂ ಇರುತ್ತದೆ.   ನಾವು ಅಂದರೆ ಬಿಜೆಪಿಯವರು ಸಾಕಷ್ಟು ಬಾರಿ ವಿರೋಧ ಪಕ್ಷದಲ್ಲಿ ಕುಳಿತು ಹಿಂದಿನ ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರದೊಂದಿಗೆ ಪರಸ್ಪರ ಸಹಕಾರ ಮತ್ತು ಸೌಹಾರ್ದತೆಯಿಂದ ಕಲಾಪಗಳನ್ನು ನಡೆಸಲು ಕೈಜೋಡಿಸಿದ್ದನ್ನು ಈಗ ಪ್ರತಿಪಕ್ಷದಲ್ಲಿರುವ ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ನೆನಪಿಸಿಕೊಳ್ಳಬೇಕು.  ಅದನ್ನು ಬಿಟ್ಟು ಅಧಿಕಾರದ ಹಪಾಹಪಿಯಿಂದ ಹತಾಶರಾಗಿ ಈ ರೀತಿ ದುಂಡಾವರ್ತನೆ ನಡೆಸಿರುವುದು ಅಕ್ಷಮ್ಯ ಮತ್ತು ಖಂಡನೀಯ ಎಂದು ವಾಗ್ದಾಳಿ ನಡೆಸಿದ್ದಾರೆ.

ಸದನದ ಕಲಾಪಗಳಿಗೆ ಸಂಬಂಧಿಸಿದಂತೆ ಅಭಿಪ್ರಾಯ-ಭಿನ್ನಾಭಿಪ್ರಾಯ ತಲೆದೋರುವುದು ಸಹಜ ಪ್ರಕ್ರಿಯೆ.  ಇಂತಹ ಸಂದಿಗ್ಧ ಸಂದರ್ಭದಲ್ಲಿ ಪರಸ್ಪರ ಚರ್ಚೆಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೇ ವಿನಹ ಕೈಕೈ ಮಿಲಾಯಿಸುವ ಹಂತಕ್ಕೆ ಯಾರೂ ಮುಂದುವರೆಯಬಾರದು. ಆದರೆ ಇಂದು ಚರ್ಚೆಗೆ ಅವಕಾಶವನ್ನೇ ನೀಡದ ವರ್ತನೆಯನ್ನು ಕಾಂಗ್ರೆಸ್ ಪ್ರದರ್ಶಿಸಿರುವುದು ಸುದೀರ್ಘ ಇತಿಹಾಸವಿರುವ ಆ ಪಕ್ಷಕ್ಕೆ ಶೋಭೆ ತರುವಂತಹ ಬೆಳವಣಿಗೆಯಲ್ಲ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಟೀಕಿಸಿದ್ದಾರೆ.legislative-council-roit-congress-disasters-dcm-laxman-savadi

ಈ ಘಟನೆಯಿಂದ ಬೇಸತ್ತು ನಾವು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಘನತೆವೆತ್ತ ರಾಜ್ಯಪಾಲರಿಗೆ ನಮ್ಮ ನೋವನ್ನು ತಿಳಿಸಿದ್ದೇವೆ.  ರಾಜ್ಯಪಾಲರೂ ಸಹ ನಮ್ಮ ನಿವೇದನೆಯನ್ನು ಅರ್ಥ ಮಾಡಿಕೊಂಡು ಶೀಘ್ರವೇ ಈ ಬಗ್ಗೆ ನ್ಯಾಯಸಮ್ಮತ ನಿರ್ಧಾರವನ್ನು ತಿಳಿಸುವುದಾಗಿ ಭರವಸೆ ನೀಡಿದ್ದಾರೆ.  ಅವರ ತೀರ್ಪನ್ನು ನಾವು ಆಡಳಿತ ಪಕ್ಷದವರು ಮತ್ತು ವಿರೋಧ ಪಕ್ಷದವರು ಸಮಾನ ಗೌರವದಿಂದ ಮಾನ್ಯ ಮಾಡುವುದರ ಮೂಲಕ ಮತ್ತೆ ವಿಧಾನಪರಿಷತ್ತಿನ ಘನತೆಯನ್ನು ಎತ್ತಿ ಹಿಡಿಯೋಣ ಎಂಬ ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

Key words: legislative council-roit- congress- disasters-DCM -Laxman Savadi