ವಿಧಾನ ಪರಿಷತ್ ಗದ್ದಲದ ವಿಚಾರದಲ್ಲಿ ನಾವು ನಿರಪರಾಧಿಗಳು- ಕಾಂಗ್ರೆಸ್ ಎಂಎಲ್‌ ಸಿ ಧರ್ಮಸೇನಾ….

Promotion

ಮೈಸೂರು,ಜನವರಿ,5,2021(www.justkannada.in): ಪರಿಷತ್‌ನಲ್ಲಿ ನಡೆದ ಗದ್ದಲ ಇದು ಜೆಡಿಎಸ್ ಬಿಜೆಪಿಯ ಪೂರ್ವ ನಿಯೋಜಿತ ಕೃತ್ಯ. ಗದ್ದಲದ ವಿಚಾರದಲ್ಲಿ ನಾವು ನಿರಪರಾಧಿಗಳು ಎಂದು ಕಾಂಗ್ರೆಸ್ ಎಂಎಲ್‌ಸಿ ಧರ್ಮಸೇನಾ ಹೇಳಿದರು.jk-logo-justkannada-mysore

ಪರಿಷತ್ ಬೇಕೊ ಬೇಡವೋ ಎಂಬ ಬಗ್ಗೆ ಸ್ಪೀಕರ್ ಚರ್ಚೆ ಹಿನ್ನೆಲೆ ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ಎಂಎಲ್‌ಸಿ ಧರ್ಮಸೇನಾ, ಕರ್ನಾಟಕ ವಿಧಾನ ಪರಿಷತ್‌ಗೆ ತನ್ನದೇ ಇತಿಹಾಸ ಇದೆ. ವಿಧಾನ ಪರಿಷತ್ ರದ್ದುಗೊಳಿಸುವ ಮಾತು ಸರಿಯಲ್ಲ. ವಿಧಾನ‌ ಪರಿಷತ್ ರಾಜ್ಯಕ್ಕೆ ಅಗತ್ಯ ಇದೆ. ಆಂದ್ರದಲ್ಲಿ ರದ್ದಾದ ಪರಿಷತ್‌ ನ ಜಗನ್ ಮತ್ತೆ ಪ್ರಾರಂಭಿಸಿದ್ದಾರೆ. ಪರಿಷತ್‌ನಲ್ಲಿ ನಡೆದ ಗದ್ದಲದ ಬಗ್ಗೆ ನಮಗೂ ಬೇಸರ ಇದೆ ಎಂದರು. legislative council-roit- blameless-mysore-Congress MLC -Dharmasena.

ಪರಿಷತ್ ನಲ್ಲಿ ಆದ ಗದ್ದಲದ ಹಿಂದಿನ ದಿನವೇ ಬಿಜೆಪಿ ಮಂತ್ರಿಯೊಬ್ಬರ ಮನೆಯಲ್ಲಿ ಉಪಸಭಾಪತಿ ಪೀಠಕ್ಕೆ ಕೂರಿಸಲು ಚರ್ಚೆ ನಡೆದಿತ್ತು. ವಿಧಾನಸೌಧದ ಬಾಗಿಲಲ್ಲಿ ಮುಖ್ಯ ಸಚೇತಕ, ಧರ್ಮೇಗೌಡ್ರು ಮಾತನಾಡುತ್ತಿದ್ದನ್ನ ನಾನೆ ಕಣ್ಣಾರೆ ಕಂಡಿದ್ದೇನೆ.ಗದ್ದಲದ ವಿಚಾರದಲ್ಲಿ ನಾವು ನಿರಪರಾಧಿಗಳು ಎಂದು ಧರ್ಮಸೇನ ತಿಳಿಸಿದರು.

ಪರಿಷತ್ ಗದ್ದಲ‌ ತನಿಖೆಗೆ ಸದನ ಸಮಿತಿ ರಚನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಧರ್ಮಸೇನಾ, ಸದನ ಸಮಿತಿ ರಚನೆಗಿಂತ ಉನ್ನತ ಮಟ್ಟದ ತನಿಖೆ‌ ಆಗಬೇಕು. ಉನ್ನತ ಮಟ್ಟದ ತನಿಖೆಯನ್ನೂ ನಾವು ಸ್ವಾಗತಿಸುತ್ತೇವೆ. ಜನರಿಗೆ ಸತ್ಯಾಸತ್ಯತೆ ಈ ಬಗ್ಗೆ ತಿಳಿಯಬೇಕು ಎಂದು ಎಂಎಲ್‌ಸಿ ಧರ್ಮಸೇನಾ  ತಿಳಿಸಿದರು.

Key words: legislative council-roit- blameless-mysore-Congress MLC -Dharmasena.