ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಲಕ್ಷ್ಮಣ್ ಸವದಿ ಸೇರಿ ನಾಲ್ವರಿಗೆ ಟಿಕೆಟ್

 

ಬೆಂಗಳೂರು,ಮೇ,24,2022(www.justkannada.in):  ರಾಜ್ಯ ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ.

ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ  ಲಕ್ಷ್ಮಣ್ ಸವದಿ, ಹೇಮಲತಾ ನಾಯಕ,  ಎಸ್.ಕೇಶವಪ್ರಸಾದ್  ಅವರಿಗೆ  ಬಿಜೆಪಿ ಟಿಕೆಟ್  ನೀಡಿದೆ. ಪರಿಷತ್ ಚುನಾವಣೆಗೆ ಇಂದು ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ನಾಮಪತ್ರ ಸಲ್ಲಿಸಲು  ಅವಕಾಶವಿದೆ. ಕೊನೆಯ ಕ್ಷಣದವರೆಗೆ ಅಭ್ಯರ್ಥಿಗಳ ಹೆಸರು ಘೋಷಣೆಯನ್ನು ಸಸ್ಪೆನ್ಸ್ ಆಗೇ ಇಟ್ಟಿದ್ದ ಬಿಜೆಪಿ ಹೈಕಮಾಂಡ್ ಇದೀಗ ಪಟ್ಟಿಯನ್ನು ಘೋಷಣೆ ಮಾಡಲಾಗಿದೆ.

ಲಕ್ಷ್ಮಣ್ ಸವದಿ, ಹೇಮಲತಾ ನಾಯಕ್, ಎಸ್ ಕೇಶವ ಪ್ರಸಾದ್ ಹಾಗೂ ಛಲವಾದಿ ನಾರಾಯಣಸ್ವಾಮಿಗೆ ಬಿಜೆಪಿಯಿಂದ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡಲಾಗಿದೆ. ಅಲ್ಲದೇ ಪರಿಷತ್ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರಕ್ಕೆ ಟಿಕೆಟ್ ನೀಡದೇ ಬಿಗ್ ಶಾಕ್ ನೀಡಿದೆ.

ಜೂನ್ 13 ರಂಧು ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆ ಬಸವರಾಜ ಹೊರಟ್ಟಿಗೂ ಟಿಕೆಟ್ ನೀಡಲಾಗಿದೆ. ಇತ್ತೀಚೆಗೆ ಜೆಡಿಎಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದರು.

Key words: legislative Council-election-BJP -List -Release.

ENGLISH SUMMARY…

BJP releases list of LC contestants: Ticket given for four including Lakshman Savadi
Bengaluru, May 24, 2022 (www.justkannada.in): The BJP has released the list of candidates who will contest the Legislative Council elections.
Chalavadi Narayanswamy, former DCM Lakshman Savdi, Hemalatha Nayak, and S. Keshavprasad have been given tickets from the BJP. Nominations can be submitted only up to 3 pm today. The BJP high command had maintained secrecy till the last minute and announced it today.
The party has given a shock to B.Y. Vijendra, son of former CM B.S. Yediyurappa, by not giving him a ticket.
The ticket has been given to Basavaraj Horatti, who recently migrated to BJP from JDS.
Keywords: BJP/ LC contestants list announced/ election