ಸದನದಲ್ಲಿ ಮುಂದುವರೆದ ಗದ್ಧಲ: ಶಾಸಕ ಸಂಗಮೇಶ್ ಅಮಾನತು ಆದೇಶ ವಾಪಸ್ ಪಡೆಯುವಂತೆ ‘ಕೈ’ ಒತ್ತಾಯ…

ಬೆಂಗಳೂರು,ಮಾರ್ಚ್,5,2021(www.justkannada.in): ರಾಜ್ಯ ವಿಧಾನ ಮಂಡಲ ಬಜೆಟ್ ಅಧಿವೇಶನ ನಡೆಯುತ್ತಿದ್ದು ಈ ಮಧ್ಯೆ ಇಂದು ಸಹ ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರ ಕುರಿತು ಸದನದಲ್ಲಿ ಗದ್ದಲ ಮುಂದುವರೆದಿದೆ.jk

ನಿನ್ನೆ ವಿಧಾನಸಭೆಯಲ್ಲಿ ವಿಪಕ್ಷಗಳ ವಿರೋಧದ ನಡುವೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರ ಪ್ರಸ್ತಾಪ ಮಾಡಿದ್ದರು. ಆದರೆ ಈ ಬಗ್ಗೆ ಚರ್ಚೆಗೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರು.

ಇದೀಗ ಇಂದು ಸಹ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ಮುಂದುವರೆದ ಹಿನ್ನೆಲೆ ವಿಧಾನಸಭಾ ಸಭಾಧ್ಯಕ್ಷರು ಕೆಲ ಕಾಲ ಸದನವನ್ನು ಮುಂದೂಡಿದರು. legislative-council-congress-protest-one nation, one election

ಇನ್ನು ವಿಧಾನಸಭಾ ಕಲಾಪದಲ್ಲೇ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ್ದ ಭದ್ರಾವತಿ ಶಾಸಕ ಸಂಗಮೇಶ್ ಅವರನ್ನ ಸದನದಿಂದ ಒಂದು ವಾರಗಳ ಕಾಲ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಮಾನತು ಮಾಡಿದ್ದರು.  ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಸದಸ್ಯರು, ಶಾಸಕ ಸಂಗಮೇಶ್ ಅವರನ್ನು ಸದನ ಕಲಾಪದಿಂದ ಅಮಾನತು ಮಾಡಿದ ಕ್ರಮವನ್ನು ಹಿಂಪಡೆಯಲು ಒತ್ತಾಯಿಸಿದರು.

Key words: legislative-council-congress-protest-one nation, one election