ವಿಧಾನ ಪರಿಷತ್ ನಲ್ಲಿ ಅಶ್ಲೀಲ ದೃಶ್ಯ ವೀಕ್ಷಣೆ ಆರೋಪ: ಸ್ಪಷ್ಟನೆ ನೀಡಿದ ಎಂಎಲ್ ಸಿ ಪ್ರಕಾಶ್ ರಾಥೋಡ್…

Promotion

ಬೆಂಗಳೂರು,ಜನವರಿ,29,2021(www.justkannada.in):  ವಿಧಾನ ಪರಿಷತ್ ಕಲಾಪದ ವೇಳೆ  ಕಾಂಗ್ರೆಸ್ ಎಂಎಲ್ ಸಿ ಪ್ರಕಾಶ್ ರಾಥೋಡ್ ಅವರು ಅಶ್ಲೀಲ ಚಿತ್ರ ವೀಕ್ಷಣೆ ಮಾಡಿರುವ ಆರೋಪ ಕೇಳಿಬಂದಿದೆ.jk

ವಿಧಾನಪರಿಷತ್ ಕಲಾಪ ನಡೆಯುತ್ತಿದ್ದ ವೇಳೆ  ಸ್ಮಾರ್ಟ್ ಫೋನ್ ಗ್ಯಾಲರಿಯಲ್ಲಿದ್ದ ಅಶ್ಲೀಲ ಚಿತ್ರವನ್ನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ವೀಕ್ಷಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಆದರೆ ಈ ಆರೋಪವನ್ನ ಪ್ರಕಾಶ್ ರಾಥೋಡ್ ಈ ಅಲ್ಲಗಳೆದಿದ್ದಾರೆ.legislative council- Accused -pornography –MLC- Prakash Rathod -clarified.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಕಾಶ್ ರಾಥೋಡ್ ಅವರು , ನಾನು ಅಶ್ಲೀಲ ದೃಶ್ಯ ವೀಕ್ಷಿಸಿಲ್ಲ. ನಾನು ಅಂತಹದ್ದೇನು ನೋಡಲಿಲ್ಲ. ಮೊಬೈಲ್ ನಲ್ಲಿ ಕೆಲವು ಮೆಸೇಜ್ ಗಳು ಹೆಚ್ಚಾಗಿದ್ದವು. ಅದನ್ನು ಡಿಲೀಟ್ ಮಾಡುತ್ತಿದ್ದೆ. ಅಂತಹ ಕೆಲಸವನ್ನ ನಾನು ಮಾಡುವುದಿಲ್ಲ. ದಯಮಾಡಿ ತಪ್ಪು ಮಾಹಿತಿ ಕೊಡಬಾರದು ಎಂದು ಸ್ಪಷ್ಟನೆ ನೀಡಿದ್ದಾರೆ.

ನನಗೆ ದಿನ ನಿತ್ಯ ಸಾವಿರಾರು ಮೆಸೇಜ್ ಬರುತ್ತದೆ, ನನ್ನ ಮೊಬೈಲ್ ನಲ್ಲಿ 15 ಸಾವಿರ ಮೆಸೇಜ್ ಇತ್ತು. ಅವುಗಳನ್ನು  ಡಿಲಿಟ್ ಮಾಡುತ್ತಿದ್ದೆ ಅಷ್ಟೆ. ನಾನು ಅಶ್ಲೀಲ ವಿಡಿಯೋ ನೋಡಿಲ್ಲ. ಕೆಲವೊಂದು ಫೋಟೋ, ದೃಶ್ಯ ಬಂದಿರಬಹುದು. ಆದರೆ, ನಾನು ಅಂತಹ ವಿಡಿಯೋವನ್ನು ನೋಡಿಲ್ಲ ಎಂದು ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ತಿಳಿಸಿದ್ದಾರೆ.

Key words: legislative council- Accused -pornography –MLC- Prakash Rathod -clarified.