ಜಿಲ್ಲಾಧಿಕಾರಿಗಳು ಬಾಸ್ ಎಂಬುವುದನ್ನು ಬಿಟ್ಟುಬಿಡಿ: ಜನರ ಮಧ್ಯೆ ಹೋಗಿ ಕೆಲಸ ಮಾಡಿ- ಸಿಎಂ ಬೊಮ್ಮಾಯಿ ಕ್ಲಾಸ್.

Promotion

ಬೆಂಗಳೂರು,ಡಿಸೆಂಬರ್,31,2021(www.justkannada.in): ಜಿಲ್ಲಾಧಿಕಾರಿಗಳು ಬಾಸ್ ಎಂಬುವುದನ್ನು ಬಿಟ್ಟುಬಿಡಿ. ಜನರ ಮಧ್ಯೆ ಹೋಗಿ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ  ಜಿಲ್ಲಾಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಸಿಎಂ ಬಸವರಾಜ ಬೊಮ್ಮಾಯಿ, ನಿಮ್ಮ ಜವಾಬ್ದಾರಿ ಅಧಿಕಾರವನ್ನು ಚಲಾಯಿಸುವುದಲ್ಲ. ಜಿಲ್ಲಾಧಿಕಾರಿಗಳು ಬಾಸ್ ಎಂಬುವುದನ್ನು ಬಿಟ್ಟುಬಿಡಿ. ಮ್ಯಾಜಿಸ್ಟ್ರೇಟ್‌ಗಳ ರೀತಿ ಕೆಲಸ ಮಾಡಬೇಡಿ. ಕೆಳ ಹಂತದ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡಿರಬೇಕು ಎಂಬುದನ್ನು ಬಿಡಿ. ವಿವೇಚನೆ ಬಳಸಿ ಕೆಲಸ ಮಾಡಿ. ತುಂಬಾ ವಿನಯತೆ, ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮಟ್ಟದ ಆಡಳಿತಾತ್ಮಕ ವಿಚಾರಗಳು, ಯೋಜನೆಗಳ ಅನುಷ್ಠಾನದ ಬಗ್ಗೆ ಡಿಸಿಗಳ ಜತೆ ಸಿಎಂ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ದೀರ್ಘ ಚರ್ಚೆ ನಡೆಯಿತು. ಈ ಸಂಬಂಧ ಬರುವ ದಿನಗಳಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗುವುದು. ಜನರೆಡೆಗೆ ಆಡಳಿತವನ್ನು ಇನ್ನಷ್ಟು ಹತ್ತಿರ ಕೊಂಡೊಯ್ಯುವ ಕೆಲಸ ಮಾಡಲು ಹೊಸ ಪ್ರಯತ್ನ ನಡೆಯಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Key words: leave – boss-work-people-CM Basavaraj Bommai-Class.