ಮೈಸೂರು ರೇಸ್ ಕ್ಲಬ್ ಗೆ ಭೂಮಿ ಗುತ್ತಿಗೆ ವಿಚಾರ: ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್…

Promotion

ಮೈಸೂರು,ನವೆಂಬರ್,27,2020(www.justkannada.in): ಮೈಸೂರು ರೇಸ್ ಕ್ಲಬ್ ಗೆ ಭೂಮಿ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್ ನೀಡಿದೆ.I didn't knew CM BSY will think so cheaply - KPCC President D.K. Shivakumar

ಕುರುಬರಹಳ್ಳಿಯಲ್ಲಿ ಸರ್ಕಾರದ 139 ಎಕರೆ ಭೂಮಿಯನ್ನು 30 ವರ್ಷಗಳವರೆಗೆ ಮೈಸೂರಿನ ರೇಸ್ ಕ್ಲಬ್ ಲಿಮಿಟೆಡ್​​ಗೆ ಗುತ್ತಿಗೆ ನೀಡಿರುವ ಕ್ರಮ ಪ್ರಶ್ನಿಸಿ ಹೈಕೋರ್ಟ್ ನಿಂದ ಸರ್ಕಾರಕ್ಕೆ ನೊಟೀಸ್ ಜಾರಿಯಾಗಿದೆ. ವಕೀಲ‌ ಉಮಾಪತಿ  ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೇರೆಗೆ ಹೈಕೋರ್ಟ್  ರಾಜ್ಯ ಸರ್ಕಾರಕ್ಕೆ ನೋಟಿಸ್  ನೀಡಿದೆ,

ಯಾವ ಆಧಾರದಲ್ಲಿ ಭೂಮಿಯನ್ನು 30 ವರ್ಷ ಗುತ್ತಿಗೆ ನೀಡಲಾಗಿದೆ. ಗುತ್ತಿಗೆಗೆ ಪ್ರತಿಫಲವಾಗಿ ಕ್ಲಬ್ ವಾರ್ಷಿಕವಾಗಿ ಗಳಿಸುವ ಆದಾಯದ ಶೇ. 2ರಷ್ಟನ್ನು ಬಾಡಿಗೆಯಾಗಿ ನಿಗದಿಪಡಿಸಲಾಗಿದೆ. ಅದರಂತೆ ಕ್ಲಬ್ ಒಂದು ವೇಳೆ ಆದಾಯ ಗಳಿಸದಿದ್ದರೆ ಬಾಡಿಗೆ ನೀಡುವಂತಿಲ್ಲವೇ ಎಂದು  ಪ್ರಶ್ನಿಸಿರುವ ಹೈಕೋರ್ಟ್, ಈ ಎಲ್ಲಾ ವಿಚಾರವಾಗಿ ಸ್ವಷ್ಟನೆ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.leasing-land-mysore-race-club-high-court-notice-govrnament

ಜಮೀನಿನ ಉಪ ಗುತ್ತಿಗೆ ಪಡೆದಿರುವ ಜಯ ಚಾಮರಾಜೇಂದ್ರ ಗಾಲ್ಫ್ ಕ್ಲಬ್ ​ಅನ್ನು ಪ್ರತಿವಾದಿಯಾಗಿ ಸೇರಿಸುವಂತೆ ಅರ್ಜಿದಾರರಿಗೆ ಸೂಚಿಸಿ, ವಿಚಾರಣೆ  ಹೈಕೋರ್ಟ್ ಮುಂದೂಡಿದೆ.

English summary…

Land lease to Mysore Race club: HC notice to govt.
Mysuru, Nov. 27, 2020 (www.justkannada.in): The Hon’ble High Court of Karnataka has issued a notice with respect to the matter of leasing out land to the Mysore Race club.
The Hon’ble HC has issued a notice to the State Government questioning the leasing of 139 acres government land at Kurubarahalli Village to the Mysore Race Club for 30 years. The notice has been issued based on a PIL submitted by Advocate Umapathi.leasing-land-mysore-race-club-high-court-notice-govrnament
The High Court has questioned the government to provide the details like on what basis the land has been given to lease. It is stipulated that 2 per cent of the earnings of the Mysore Club would be collected as returns to the contract. The Hon’ble Court has questioned if the club fails to gain the target income doesn’t it need to pay the rent?
The trail was postponed instructing the applicant to include the Jayachamarajendra Golf Club, which possess the sub-contract as defendant.
Keywords: High Court/Mysore Race Club/ govt. land/lease

Key words: Leasing -land – Mysore Race Club-High Court -notice -Govrnament