ಕೋಲಾರದಲ್ಲಿ ಸಿದ‍್ಧರಾಮಯ್ಯ ಸೋಲಿಸಿ ಎಂದು ಕರಪತ್ರ ಹಂಚಿಕೆ.

Promotion

ಕೋಲಾರ,ಜನವರಿ,21,2023(www.justkannada.in):  ಮಾಜಿ ಸಿಎಂ ಸಿದ್ಧರಾಮಯ್ಯ ಈ ಬಾರಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಈ ಮಧ್ಯೆ ಕೋಲಾರದಾದ್ಯಂತ ಸಿದ‍್ಧರಾಮಯ್ಯ ವಿರುದ್ಧ ಕರಪತ್ರ ಹಂಚಲಾಗುತ್ತಿದೆ.

ಸಿದ್ದರಾಮಯ್ಯ ವಿರುದ್ಧ ಈಗ ಕೋಲಾರದಲ್ಲಿ ಜಾಗೃತಿ ಅಭಿಯಾನ ನಡೆಯುತ್ತಿದ್ದು,  ಕೋಲಾರ ಕ್ಷೇತ್ರದ ದಲಿತ ಮತದಾರರಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಸೋಲಿಸಿ ಎಂಬ ಕರಪತ್ರ ಹಂಚಿ ಅಭಿಯಾನ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನ ಸೋಲಿಸುವ ಮೂಲಕ ದಲಿತರ ಸ್ವಾಭಿಮಾನ ಮೆರೆಯೋಣ ಎಂಬ ಹೆಸರಿನ ಕರಪತ್ರ ಹಂಚಲಾಗುತ್ತಿದೆ. ಆದರೆ ಕರಪತ್ರದಲ್ಲಿ ಯಾವುದೇ ಪಕ್ಷಗಳ ಹೆಸರಿಲ್ಲ.

ಸಿದ್ಧರಾಮಯ್ಯ ತಮ್ಮದೇ ಪಕ್ಷದ ನಾಯಕ ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರನ್ನ ಹಿನ್ನಡೆಯುವಂತೆ ಮಾಡಿದ್ದಾರೆ ಎಂಬ ಆರೋಪಗಲು ಕೇಳಿ ಬಂದಿದ್ದವು.

Key words: Leaflet -distribution – defeat -Siddaramaiah -Kolar.