ನಾಯಕತ್ವ ಬದಲಾವಣೆಯಾದ್ರೆ ಬಿಜೆಪಿ ಸರ್ವನಾಶವಾಗೋದು ಖಚಿತ- ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ.

Promotion

ಬೆಂಗಳೂರು.ಜುಲೈ, 20.2021 (www.justkannada.in):  ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಇದು ಸೂಕ್ತ ಸಮಯವಲ್ಲ. ಒಂದು ವೇಳೆ ನಾಯಕತ್ವ ಬದಲಾವಣೆಯಾದ್ರೆ ಬಿಜೆಪಿ ಸರ್ವನಾಶವಾಗೋದು ಖಚಿತ  ಎಂದು ದಿಂಗಾಲೇಶ್ವರ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.jk

ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ  ಇಂದು ಬೆಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ ಅವರು, ಒಂದು ವೇಳೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದರೆ ಮುಂದೆ ಬಿಜೆಪಿ ಸರ್ವನಾಶವಾಗುವುದು ಖಚಿತ. ಬಿ,ಎಸ್, ಯಡಿಯೂರಪ್ಪ ಅವರು ಕೇವಲ ಲಿಂಗಾಯುತ ಸಮುದಾಯಕ್ಕೆ ಸೀಮಿತವಾಗದೆ, ಎಲ್ಲಾ ಜನಾಂಗದವರಿಗೂ ಅನೂಕೂಲವಾಗುವ ಯೋಜನೆಗಳನ್ನು ರಾಜ್ಯದಲ್ಲಿ ತಂದಿದ್ದಾರೆ. ಆದ್ದರಿಂದ ಇನ್ನೂ ಎರಡು ವರ್ಷಗಳ ಕಾಲ ಬಿ,ಎಸ್,ವೈ ಅವರೆ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳು ಬೇರೆಯವರು ಆದಾಗ ಬದಲಾವಣೆಯ ವಿಚಾರಗಳು ಪ್ರಸ್ತಾಪವಾಗುವುದಿಲ್ಲ, ಆದರೆ ಈಗ ಬದಲಾವಣೆಯ ವಿಚಾರಗಳು ಏಕೆ ಬರುತ್ತೀವೆ. ಹಾಗೂ ಇಂತಹ ಸಂದರ್ಭದಲ್ಲಿ ಬಿಎಸ್ ವೈ ಅವರನ್ನು ಬದಲಾವಣೆ ಮಾಡುವ ಅವಶ್ಯಕತೆ ಏನು ಎಂದು ಪ್ರಶ್ನಿಸಿದ್ದಾರೆ.

Key words: leadership -change -sure – end – BJP-Warning – Dingaleswara Sri.