ನಾಯಕತ್ವ ಬದಲಾವಣೆ ಖಚಿತ: ಉತ್ತರ ಕರ್ನಾಟಕದವರೇ ಮುಂದಿನ ಸಿಎಂ-ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…

Promotion

ವಿಜಯಪುರ,ಏಪ್ರಿಲ್,7,2021(www.justkannada.in): ಮೇ 2 ರ ನಂತರ ನಾಯಕತ್ವ ಬದಲಾವಣೆ ಖಚಿತ. ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.Illegally,Sand,carrying,Truck,Seized,arrest,driver

ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ಸಿದ್ದರಾಮಯ್ಯ, ಡಿಕೆಶಿ ಅದ್ಯಾವಾಗ ಯಡಿಯೂರಪ್ಪನವರ ವಕ್ತಾರರಾಗಿದ್ದಾರೆ. ಅವರು ನಮಗೆ ಸ್ವೀಪ್ ಆಗುತ್ತೆ ಅಂತ ಕನಸು ಕಾಣ್ತಿರಬಹುದು. ನಮ್ಮ‌ ಹೈಕಮಾಂಡ್ ಅಷ್ಟೇನು ವೀಕ್ ಆಗಿಲ್ಲ. ಯಡಿಯೂರಪ್ಪನವರಿಗೆ ಸುಪ್ರೀಂ ಸ್ಟೇ ಕೊಟ್ಟಿದೆ. ಇದು ಬಹಳ ನಿರಾಳ ಅಂತ ಕೆಲವು ಮಾಧ್ಯಮಗಳು ಹಾಕ್ತಿವೆ ಎಂದು ಟೀಕಿಸಿದರು.

ಶಾಸಕ ಬೆಲ್ಲದ್ ಜೊತೆ ಮಾತುಕತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ಅರಮನೆ ಮೈದಾನದಲ್ಲಿ ಸಮಾವೇಶ ಮಾಡಿದ್ದೆವು. ನಮ್ಮ ಸಮುದಾಯದ ಸಮಾವೇಶ ನಡೆದಿತ್ತು. ಈಗ ಚುನಾವಣೆ ಬಂದಿದೆ ಪ್ರಚಾರದ ಬಗ್ಗೆ ಚರ್ಚಿಸಿದ್ವಿ. ನಮ್ಮ ಪಾರ್ಟಿಯವರು ನನ್ನನ್ನ ಪ್ರಚಾರಕ್ಕೆ ಕರೆದಿಲ್ಲ. ಆದರೂ  ನಾವೇ ಪ್ರಚಾರದಲ್ಲಿ ಭಾಗವಹಿಸುತ್ತೇವೆ. ಪ್ರಚಾರಕ್ಕೆ ಬರುವಂತೆ ಬೆಳಗಾವಿಯಿಂದ ಸಾಕಷ್ಟು ಕರೆಗಳು ನಮಗೆ ಬರುತ್ತಿವೆ ಎಂದರು.

ಬೆಲ್ಲದ್ ನಾನು ಪಂಚಮಸಾಲಿ ಸಮುದಾಯದವರು. ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿದ್ದೆವು. ಹೀಗಾಗಿ ಪ್ರಚಾರಕ್ಕೆ ಹೋಗುವ ಬಗ್ಗೆ ಚರ್ಚಿಸಿದ್ದೇವೆ. ನಮ್ಮ ಪ್ರಧಾನಿಯವರನ್ನ ನೋಡಿ ಮತಹಾಕಿ. ಇದನ್ನೇ ನಮ್ಮ ಸಮುದಾಯದಲ್ಲಿ ಕೇಳ್ತೇವೆ. ನಾಳೆಯಿಂದ ನಾವು ಪ್ರಚಾರ ಮಾಡ್ತೇವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

Leadership- change – certain-North Karnataka - next CM-MLA-Basanagowda Patil Yatnal.
ಕೃಪೆ-internet

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದ ವಿಚಾರ  ಕುರಿತು ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ಯಡಿಯೂರಪ್ಪನವರು ಕೊಡದಿದ್ರೂ ಪರವಾಗಿಲ್ಲ. ಯಾರು ಹೊಸ ಮುಖ್ಯಮಂತ್ರಿಯಾಗ್ತಾರೆ ಅವರು ಮಾಡ್ತಾರೆ. ನನ್ನ ಜೊತೆ ಇಡೀ ಬಿಜೆಪಿ ಶಾಸಕರು ಇದ್ದಾರೆ ಎಂದಯ ಯತ್ನಾಳ್ ತಿಳಿಸಿದರು.

ಈಶ್ವರಪ್ಪ ಮತ್ತೆ ಉಲ್ಟಾ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್,  ಯಾರ್ಯಾರ ನಾಯಕತ್ವ ಎಷ್ಟಿದೆ ಗೊತ್ತಾಗುತ್ತೆ. ನೀವು ಅವರನ್ನೇ ಕೇಳಬೇಕು. ಅವರು ರಾಜ್ಯಪಾಲರ ಭೇಟಿ ಮಾಡಿದ್ರು. ಅದು ನನಗೇನೂ ಗೊತ್ತಿರಲಿಲ್ಲ. ಏ.17ರ ನಂತರ ಬಹಳ ಮಂದಿ ರೊಚ್ಚಿಗೇಳ್ತಾರೆ. ಸೂರ್ಯ ಚಂದ್ರ ಇರುವವರೆಗೆ ಹೇಗೆ ಮುಖ್ಯಮಂತ್ರಿಯಾಗೋಕೆ‌ ಸಾಧ್ಯ. ಯಡಿಯೂರಪ್ಪನವರಿಗೆ ೩೭೦ ಆ್ಯಕ್ಟ್ ಏನಾದ್ರೂ ಕೊಟ್ಟವರಾ?. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಂತೆ ಅವರಿಗೆ ಎರಡು ವರ್ಷ ಅವಕಾಶ ಕೊಟ್ಟಿದ್ದಾರೆ. ಅದೇ ಅವರಿಗೆ ಹೆಚ್ಚಾಯ್ತು ಎಂದು ಸಿಎಂ ಬಿಎಸ್ ವೈ ವಿರುದ್ಧ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

Key words: Leadership- change – certain-North Karnataka – next CM-MLA-Basanagowda Patil Yatnal.