ಸುಮ್ಮನೆ ಬಿಳಿ ಬಟ್ಟೆ ಧರಿಸಿದ್ರೆ ಆಗಲ್ಲ: ಹೆಚ್ಚಿನ ಲೀಡ್ ತಂದುಕೊಟ್ರೆ ಲೀಡರ್- ಕೈ ಕಾರ್ಯಕರ್ತರಿಗೆ ಸಚಿವ ಡಿ.ಕೆ ಶಿವಕುಮಾರ್ ಪಾಠ…

Promotion

ಧಾರವಾಡ,ಮೇ,7,2019(www.justkannada.in):  ಸುಮ್ಮನೆ ಬಿಳಿ ಬಟ್ಟೆ ಧರಿಸಿದ್ರೆ ಆಗಲ್ಲ. ಮನೆ ಮನೆಗೆ ಹೋಗಿ ಕರಪತ್ರ ಹಂಚಬೇಕು ಎಂದು ಸಚಿವ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಿದರು.

ಮೇ 19 ರಂದು ಕುಂದಗೋಳ ಉಪಚುನಾವಣೆ ಹಿನ್ನೆಲೆ, ಇಂದು ಸಚಿವ ಡಿ.ಕೆ ಶಿವಕುಮಾರ್ ಕುಂದಗೋಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜತೆ ಸಭೆ ನಡೆಸಿ ಚುನಾವಣಾ ಪ್ರಚಾರದ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಕಾರ್ಯಕರ್ತರಿಗೆ ಕೆಲ ಸೂಚನೆಗಳನ್ನ ನೀಡಿದರು.

ಸಭೆಯಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ತಮ್ಮ ಬೂತ್ ಗಳಲ್ಲಿ ಹೆಚ್ಚಿನ ಲೀಡ್ ಕೊಡುವವರು ನನ್ನಂತೆಯೇ ಲೀಡರ್ ಆಗುತ್ತಾರೆ. ಅದನ್ನ ಬಿಟ್ಟು ಬಿಳಿ ಬಟ್ಟೆ ತೊಟ್ಟು ನ್ನ ಜತೆ ಬಂದ್ರೆ ನಾನು ನಂಬಲ್ಲ. ಮನೆ ಮನೆಗೆ ಹೋಗಿ ಕರ ಪತ್ರಗಳನ್ನ ಹಂಚಬೇಕು. ಯಾರೇ ಏನೇ ಆಂದ್ರೂ ನೀವು ಕರಪತ್ರಗಳನ್ನ ಹಂಚಿ ಎಂದು ತಿಳಿಸಿದರು.

Key words: Leader – get –more- lead-  Minister – DK Sivakumar –congress activitist