ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಖಂಡಿಸಿ ಮೈಸೂರಿನಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ.

Promotion

ಮೈಸೂರು,ಜನವರಿ,27,2022(www.justkannada.in): ರಾಯಚೂರಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದನ್ನ ಖಂಡಿಸಿ ಮೈಸೂರು ವಕೀಲರ ಸಂಘದಿಂದ ಪ್ರತಿಭಟನೆ ನಡೆಯಿತು.

ಮೈಸೂರಿನ ನ್ಯಾಯಾಲಯದ ಮುಂಭಾಗ ಮೈಸೂರು ಬಾರ್ ಕೌನ್ಸಿಲ್ ಅಧ್ಯಕ್ಷ ಮಹದೇವಸ್ವಾಮಿ ನೇತೃತ್ವದಲ್ಲಿ  ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು. ನ್ಯಾಯಾಲಯದ ಮುಂಭಾಗ ರಸ್ತೆ ಬಂದ್ ಮಾಡಿ  ನ್ಯಾಯಾಲಯದ ಕಲಾಪ ಬಂದ್ ಮಾಡಿ ವಕೀಲರು ಧರಣಿ ನಡೆಸಿದರು.

ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ಧಿಕ್ಕಾರ ಕೂಗಿದ ವಕೀಲರು, ಕೂಡಲೇ ಮಲ್ಲಿಕಾರ್ಜುನಗೌಡ ಬಂಧಿಸಿ ದೇಶದ್ರೋಹ ಕೇಸ್ ದಾಖಲು ಮಾಡುವಂತೆ ಒತ್ತಾಯಿಸಿದರು.

Key words: Lawyers- protest – Mysore