ದೊಡ್ಡ ಪ್ರಮಾಣದಲ್ಲಿ ಹಣ ವರ್ಗಾವಣೆಯಾಗಿದೆ: ಡಿಕೆ ಶಿವಕುಮಾರ್ ಗೆ  ಜಾಮೀನು ನೀಡಬೇಡಿ- ಇಡಿ ಪರ ವಕೀಲ ನಟರಾಜು ವಾದ ಮಂಡನೆ…

ನವದೆಹಲಿ,ಅ,17 2019(www.justkannada.in):  ದೊಡ್ಡ ಪ್ರಮಾಣದಲ್ಲಿ ಹಣ ವರ್ಗಾವಣೆಯಾಗಿದ್ದು. ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದೆ. ಹೀಗಾಗಿ ಡಿ.ಕೆ ಶಿವಕುಮಾರ್ ಗೆ ಜಾಮೀನು ನೀಡಬೇಡಿ ಎಂದು ಇಡಿ ಪರ ವಕೀಲ ಎಎಸ್ ಜಿ ನಟರಾಜ್ ವಾದ ಮಂಡಿಸಿದರು.

ಇಂದು ನವದೆಹಲಿ ಹೈಕೋರ್ಟ್ ನಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಇಡಿ ಪರ ವಾದ ಮಂಡಿಸಿದ ವಕೀಲ ನಟರಾಜ್,  ಡಿ.ಕೆ ಶಿವಕುಮಾರ್ ರಿಂದ ಕೋಟಿ ಕೋಟಿ ಹಣ ವರ್ಗಾವಣೆಯಾಗಿದೆ. 317  ಬ್ಯಾಂಕ್ ಅಕೌಂಟ್ ಮೂಲಕ ಹಣ ವರ್ಗಾವಣೆಯಾಗಿದೆ.  ಸಿಕ್ಕಿರುವ ದಾಖಲೆ, ಹೇಳಿಕೆ ಆಧರಿಸಿ ಡಿ.ಕೆ ಶಿವಕುಮಾರ್ ಬಂಧಿಸಲಾಗಿದೆ. ಇನ್ನು ವಿಚಾರಣೆ ವೇಳೆ ಡಿ.ಕೆ ಶಿವಕುಮಾರ್ ಸಹಕಾರ ನೀಡಲ್ಲ. ವಿಚಾರಣೆಯಿಂದ ನುಣುಚಿಕೊಳ್ಳುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ  12 ಮಂದಿಗೆ ಸಮನ್ಸ್ ನೀಡಿದ ಹೇಳಿಕೆ  ಪಡೆಯಲಾಗಿದೆ. ಡಿ.ಕೆ ಶಿವಕುಮಾರ್ ರಿಂದ ದೊಡ್ಡ ಮಟ್ಟದಲ್ಲಿ ಹಣ ವರ್ಗಾವಣೆಯಾಗಿದೆ. ಭಾರಿ ಷಡ್ಯಂತ್ರ ನಡೆದಿದೆ. ದೇಶದ ಆರ್ಥಿಕತೆಗೆ ಇದು ದೊಡ್ಡ ಹೊಡೆತ.  ಈ ಬಗ್ಗೆ ಹೆಚ್ಚಿನ ತನಿಖೆ ಅಗತ್ಯವಿದೆ.  ಕೃಷಿಯಿಂದ ಆಸ್ತಿ ಸಂಪಾದನೆ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇಷ್ಟೊಂದು ಆಸ್ತಿಯನ್ನ ಕೃಷಿಯಿಂದ ಸಂಪಾದಿಸಲು ಸಾಧ್ಯವಿಲ್ಲ.  ಇಲ್ಲಿ ಡಿ.ಕೆಶಿ ಆಸ್ತಿ ಆಸ್ತಿ ಮೌಲ್ಯ ಹೋಲಿಕೆ ಸಾಧ್ಯವಿಲ್ಲ. ದಾಳಿ ವೇಳೆ ಬ್ಯಾನ್ ಆದ ನೋಟುಗಳು ಸಿಕ್ಕಿವೆ. ಕೋಟಿ ಕೋಟಿ ಹಣಕ್ಕೆ ದಾಖಲೆಗಳೇ ಇಲ್ಲ. ಇವೆಲ್ಲ ಬಗ್ಗೆ ತನಿಖೆ ಅಗತ್ಯವಿದೆ. ಹೀಗಾಗಿ ಡಿ.ಕೆ ಶಿವಕುಮಾರ್ ಗೆ ಜಾಮೀನು ನೀಡಬೇಡಿ ಎಂದು ಇಡಿ ಪರ ವಕೀಲ ನಟರಾಜು ವಾದ ಮಂಡಿಸಿದರು.

Key words: large amount -money – transfers-Don’t bail -DK Sivakumar –  ED advocate- nataraj