ಪಿಟಿಸಿಎಲ್ ಜಮೀನುಗಳನ್ನ ಭೂ ಪರಿವರ್ತನೆ ಮಾಡಿದ್ರೆ ಜಿಲ್ಲಾಧಿಕಾರಿಗಳೇ ನೇರ ಹೊಣೆ-ಸರ್ಕಾರದಿಂದ ಸುತ್ತೋಲೆ.

ಬೆಂಗಳೂರು,ಅಕ್ಟೋಬರ್,1,2021(www.justlkannada.in): ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಪಿಟಿಸಿಎಲ್ ಜಮೀನುಗಳನ್ನ ಭೂ ಪರಿವರ್ತನೆ ಮಾಡಿದ್ದಲ್ಲಿ ಆಯಾ ಜಿಲ್ಲಾಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಭೂರಹಿತರಾಗುವುದನ್ನ ತಪ್ಪಿಸಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಭೂಮಿ ಪರಭಾರೆ ನಿಷೇಧ)ಅಧಿನಿಯಮ 1978 ರ ಅನ್ವಯ ನಿರ್ಭಂಧ ವಿಧಿಸಲಾಗಿದೆ. ಈ ಸಂಬಂಧ ಹಲವು ಸುತ್ತೋಲೆಗಳನ್ನೂ ಸಹ ಹೊರಡಿಸಿದೆ. ಹೀಗಿದ್ದೂ ಕೆಲವು ಸ್ಥಾಪಿತ ಹಿತಾಸಕ್ತಿಗಳು ದುರುಪಯೋಗಪಡಿಸಿಕೊಂಡು ಪಿಟಿಸಿಎಲ್ ಕಾಯ್ದೆಗೆ ಒಳಪಡುವ ಜಮೀನುಗಳನ್ನ ಸರ್ಕಾರದ ಅನುಮತಿ ಪಡೆಯದೆ ಭೂ ಪರಿವರ್ತನೆ ಮಾಡಿ ಮಾರಾಟ ಮಾಡುವ ಹುನ್ನಾರ ನಡೆಯುತ್ತಿದೆ.ministers-Important- meeting – Corona- control-bangalore

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಭೂ ರಹಿತವಾಗುವುದನ್ನ ತಪ್ಪಿಸಲು ಪಿಟಿಸಿಎಲ್ ಕಾಯ್ದೆ ಗಂಭೀರವಾಗಿ ಪಾಲಿಸಬೇಕಿದೆ. ಹಾಗೊಂದು ವೇಳೆ ಸರ್ಕಾರದಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯದೆ ಭೂ ಪರಿವರ್ತನೆ ಮಾಡಿದ್ದಲ್ಲಿ ಜಿಲ್ಲಾಧಿಕಾರಿಗಳೇ ನೇರ  ಜವಾಬ್ದಾರಿ ಮಾಡಲಾಗುವುದೆಂದು ಸುತ್ತೋಲೆ ಹೊರಡಿಸಲಾಗಿದೆ. ಕರ್ನಾಟಕ ಸಚಿವಾಲಯ ಬಹುಮಹಡಿ ಕಟ್ಟಡಗಳ ಸರ್ಕಾರದ ಅಧೀನ ಕಾರ್ಯದರ್ಶಿ(ಕಂದಾಯ ಇಲಾಖೆ) ಸಿ.ಬಲರಾಮ್ ಸುತ್ತೋಲೆ ಹೊರಡಿಸಿದ್ದಾರೆ.

Key words:  Land conversion – PTCL- lands – directly -responsible -DC

ENGLISH SUMMARY…

Deputy Commissioner will be responsible if the PTCL land is converted: Govt. Circular
Bengaluru, October 1, 2021 (www.justkannada.in): The State Government has issued a circular informing that if there are any cases where the PTCL land has been converted without taking prior permission of the government, the Deputy Commissioner of the respective district will be held responsible.
Karnataka Scheduled Castes and Scheduled Tribes (Prohibition of Transfer of Certain Lands) Act, 1978 (Karnataka Act 2 of 1979) or PTCL restrict the conversion of land in order to prevent SCs/STs from becoming landless. Several notifications were issued earlier also in this regard. Despite this several vested interests have continued to misuse the PTCL Act and are involved in the conversion of land without getting prior permission from the government, and efforts are being made to sell it.ministers-Important- meeting – Corona- control-bangalore
Hence, the government has mentioned that the PTCL Act should be considered seriously in order to prevent the SC/ST people from becoming landless. If any such cases are found the Deputy Commissioner will be held responsible, the circular issued by Under Secretary to the Government (Revenue Department) read.
Keywords: PTCL Act/ land conversion/ SC/STs/ Deputy Commissioners