ಕರ್ನಾಟಕ ರಾಜ್ಯ ಸಹಕಾರ ಪತ್ತಿನ‌ ಸಂಘಗಳ‌ ಮಹಾಮಂಡಳದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಲಲಿತಾ ಜಿ. ಟಿ ದೇವೇಗೌಡ ಆಯ್ಕೆ…

Promotion

ಬೆಂಗಳೂರು,ಜು,10,2019(www.justkannada.in): ಕರ್ನಾಟಕ ರಾಜ್ಯ ಸಹಕಾರ ಪತ್ತಿನ‌ ಸಂಘಗಳ‌ ಮಹಾಮಂಡಳದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ  ಲಲಿತಾ ಜಿ ಟಿ ದೇವೇಗೌಡ ಆಯ್ಕೆಯಾಗಿದ್ದಾರೆ.

ಇಂದು  ಬೆಂಗಳೂರಿನ ಮಲ್ಲೇಶ್ವರಂ  ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ‌ ಸಂಘಗಳ‌ ಮಹಾಮಂಡಳದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಲಲಿತಾ ಜಿಟಿ ದೇವೇಗೌಡ  ಅಧಿಕಾರ ಸ್ವೀಕಾರ ಮಾಡಿದರು.ಮೈಸೂರು ಜಿಲ್ಲಾ ಉಸ್ತುವಾರಿ ಜಿಟಿ ದೇವೇಗೌಡ ಪತ್ನಿ ಲಲಿತ ಜಿಟಿ ದೇವೇಗೌಡ ಕಳೆದ ಜಿ.ಪಂ ಚುನಾವಣೆಯಲ್ಲಿ ಸ್ಪರ್ದಿಸಿ ಸೋಲನ್ನಪ್ಪಿದ್ದರು.

ಆದರೆ ಇದೀಗ ಕಳೆದ ವಾರವಷ್ಟೇ ನಡೆದಿದ್ದ ಕರ್ನಾಟಕ ರಾಜ್ಯ ಸಹಕಾರ ಪತ್ತಿನ‌ ಸಂಘಗಳ‌ ಮಹಾಮಂಡಳದ ಆಡಳಿತ ಮಂಡಳಿ ಸದಸ್ಯರ ಚುನಾವಣೆಯಲ್ಲಿ ಆಯ್ಕೆ ಆಗಿದ್ದ ಲಲಿತಾ ಜಿಟಿ ದೇವೇಗೌಡ ಇಂದು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

Key words: Lalitha G.T devegowda- new President – Karnataka State -Co-operative Societies -Federation