ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಅಪ್ಪುಗೆ ಗೌರವ

Promotion

ಬೆಂಗಳೂರು, ಜೂನ್ 14, 2022 (www.justkannada.in): ಜಗತ್ಪ್ರಸಿದ್ದ ಲಾಲ್ ಬಾಗ್ ನಲ್ಲಿ ಅಗಸ್ಟ್ 5 ರಿಂದ 15 ರವರೆಗೆ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ವಿಶೇಷ ಏನೆಂದರೆ ಈ ಬಾರಿ  ಡಾ.ಪುನೀತ್  ರಾಜಕುಮಾರ್ ಅವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತಿದೆ.

ತೋಟಗಾರಿಕೆ ಇಲಾಖೆಯು ಮೈಸೂರು ತೋಟಗಾರಿಕಾ ಸೊಸೈಟಿಯೊಂದಿಗೆ ವರ್ಷದಲ್ಲಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂದು ಎರಡು ಬಾರಿ ಪುಷ್ಪ ಪ್ರದರ್ಶನವನ್ನು ಆಯೋಜಿಸುತ್ತದೆ.

ಕಳೆದ ಬಾರಿ ಜನವರಿ 26 ರ ರಂದು ಪುನೀತ್ ರಾಜಕುಮಾರ್ ಅವರ ಅವರ ಹೆಸರಿನಲ್ಲಿ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಆಗ ಅದನ್ನು ನಮಗೆ ನಡೆಸಲು ಸಾಧ್ಯವಾಗಲಿಲ್ಲ. ಈಗ ಈ ವಿಚಾರವಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ಲಾಲ್‌ಬಾಗ್‌ನಲ್ಲಿ ಬೆಳೆಯುವ ಹೂವುಗಳ ಜೊತೆಗೆ ಮೈಸೂರು, ಊಟಿ, ಹೈದರಾಬಾದ್ ಮತ್ತು ದೇಶದ ಇತರ ಭಾಗಗಳಿಂದ ಹೂವುಗಳು ಬಂದಿವೆ.