ಅತ್ಯುನ್ನತ ಆದರ್ಶಗಳ ಪ್ರತೀಕ ಲಾಲ್ ಬಹದ್ಧೂರ್ ಶಾಸ್ತ್ರಿ ಅವರ ಬದುಕು ದೇಶಕ್ಕೆ ಮಾದರಿ- ಸಚಿವ ಅಶ್ವತ್ ನಾರಾಯಣ್.

kannada t-shirts

  ಬೆಂಗಳೂರು,ಜನವರಿ,11,2022(www.justkannada.in):  ಉನ್ನತ ವಿಚಾರ, ಸರಳ ಬದುಕು ಮತ್ತು ಉತ್ಕೃಷ್ಟ ನೈತಿಕತೆಯ ಪ್ರತೀಕವಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಬದುಕು ದೇಶಕ್ಕೆ ಮಾದರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಸ್ಮರಿಸಿದ್ದಾರೆ.

ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯ ಅಂಗವಾಗಿ ಮಂಗಳವಾರ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದ ಸಚಿವ ಅಶ್ವಥ್ ನಾರಾಯಣ್, ದೇಶದ ರಕ್ಷಣೆಗೆ ಕಟಿಬದ್ಧರಾಗಿದ್ದ ಅವರ ಕೆಚ್ಚು ಭಾರತದ ಸಮಗ್ರತೆಯನ್ನು ಉಳಿಸುವಲ್ಲಿ ನಿರ್ಣಾಯಕ ಶಕ್ತಿಯಾಗಿದೆ ಎಂದರು.

ಮಹಾತ್ಮ ಗಾಂಧೀಜಿಯವರ ವಿಚಾರ ಮತ್ತು ಜೀವನಗಳಿಂದ ಪ್ರೇರೇಪಿತರಾಗಿ ದೇಶಸೇವೆಗೆ ಧುಮುಕಿದ ಶಾಸ್ತ್ರಿಯವರು ವಿದ್ವತ್ತು ಮತ್ತು ದೂರದರ್ಶಿತ್ವಗಳನ್ನು ಹೊಂದಿದ್ದ ತುಂಬಾ ಅಪರೂಪದ್ದ ರಾಜನೀತಿಜ್ಞರಾಗಿದ್ದರು. ಅವರು ಇನ್ನಷ್ಟು ವರ್ಷಗಳ ಕಾಲ ನಮ್ಮ ಪ್ರಧಾನಿಯಾಗಿ ಇದ್ದಿದ್ದರೆ ದೇಶವು ಹಲವು ಶಾಪಗಳಿಂದ ವಿಮುಕ್ತವಾಗಿರುತ್ತಿತ್ತು ಎಂದು ಅವರು ನುಡಿದರು.

ದೇಶವು ಅನುಸರಿಸಬೇಕಾದ ವಿದೇಶಾಂಗ ನೀತಿ ಹೇಗಿರಬೇಕೆನ್ನುವುದು ಶಾಸ್ತ್ರಿಯವರಿಗೆ ಚೆನ್ನಾಗಿ ಗೊತ್ತಿತ್ತು. ಈ ವಿಚಾರದಲ್ಲಿ ಅವರು ತಮ್ಮ ಸಮಕಾಲೀನರಿಗಿಂತ ಹೆಚ್ಚು ವಾಸ್ತವಿಕ ದೃಷ್ಟಿಕೋನವನ್ನು ಹೊಂದಿದ್ದರು. ಅದರಲ್ಲೂ ದೇಶವನ್ನು ಕಾಯುವ ಸೇನಾಸಿಬ್ಬಂದಿಯನ್ನು ಗುರುತಿಸುವ ಮೂಲಕ ಅವರಿಗೆಲ್ಲ ಮನ್ನಣೆ ಸಿಕ್ಕುವಂತೆ ನೋಡಿಕೊಂಡರು. ಇದು ಅನುಸರಣೀಯ ಕ್ರಮವಾಗಿದೆ ಎಂದು ಅಶ್ವತ್ ನಾರಾಯಣ್ ನೆನೆದರು.

Key words: Lal Bahadur Shastri- life –model-Minister- Ashwath Narayan

website developers in mysore