ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ಕಾಸರಗೋಡು ಘಟಕದ ದತ್ತಿನಿಧಿ ಪ್ರಶಸ್ತಿ ಪ್ರಕಟ

Promotion

ಬೆಂಗಳೂರು,ಮೇ,7,2022(www.justkannada.in):  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಅಂಗ ಸಂಸ್ಥೆಯಾಗಿರುವ ಗಡಿನಾಡ ಜಿಲ್ಲೆಯಾದ ಕಾಸರಗೋಡು ಘಟಕ ಪ್ರದಾನ ಮಾಡಲಿರುವ ದತ್ತಿನಿಧಿ ಪ್ರಶಸ್ತಿಗಳನ್ನು ಇಂದು ಘೋಷಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕಾಸರಗೋಡು ಘಟಕದ ಅಧ್ಯಕ್ಷ ಸುಬ್ಬಯ್ಯಕಟ್ಡೆ ಅವರು ಪ್ರಶಸ್ತಿ ಪ್ರಕಟಿಸಿದರು.

ಅವ್ವ ಹಸನ್ ಫೌಂಡೇಶನ್ ಪ್ರಶಸ್ತಿಗೆ  ಕಲಬುರ್ಗಿ ಆಕಾಶವಾಣಿಯ ಸದಾನಂದ ಪೆರ್ಲ, ಮೊಗದೋಡಿ ಗೋಪಾಲಕೃಷ್ಣ ಮೇಲಾಂಟ ಪ್ರಶಸ್ತಿಗೆ ಪತ್ರಕರ್ತ ಮಹಮ್ಮದ್ ಆರೀಫ್ ಪಡುಬಿದ್ರೆ, ಕೆ.ವಿ.ಆರ್.ಟ್ಯಾಗೋರ್ ಪ್ರಶಸ್ತಿಗೆ ಮಂಗಳೂರಿನ ಪತ್ರಕರ್ತ ಎಸ್.ಜಗದೀಶ್ ಚಂದ್ರ ಅಂಚನ್, ಡಾ.ಸೋಮಶೇಖರ್ ಪ್ರಶಸ್ತಿಗೆ ಸುವರ್ಣ ನ್ಯೂಸ್ ನ  ಜಯಪ್ರಕಾಶ್ ಶೆಟ್ಟಿ ಉಪ್ಪಳ, ಪ್ರಚೋದಯ ಪ್ರಶಸ್ತಿಗೆ ಕಾಸರಗೋಡಿನ ಹವ್ಯಾಸಿ ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ, ಎಡನೀರು ಕೇಶವಾನಂದ ಭಾರತೀ ಸ್ವಾಮೀಜಿ ಸ್ಮರಣಾರ್ಥ ಪ್ರಶಸ್ತಿಗೆ ಡಾ. ವಾಣಿಶ್ರೀ ಉಚ್ಚಿಲ್ಕರ್, ಪ್ರಭಾಕರ್ ಕಲ್ಲೂರಾಯ  ಬನದಗದ್ದೆ ಪ್ರಶಸ್ತಿಗೆ ಕೊಡಗಿನ ಹಿರಿಯ ಪತ್ರಕರ್ತೆ ಆರ್.ಸವಿತಾ ರೈ ಭಾಜನರಾಗಿದ್ದಾರೆ.

ಪತ್ರಿಕಾರಂಗದಲ್ಲಿ ವಿವಿಧ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಎ.ಆರ್.ಸುಬ್ಬಯ್ಯಕಟ್ಟೆ ತಿಳಿಸಿದರು.

ಪ್ರಶಸ್ತಿಯು 25 ಸಾವಿರ ನಗದು, ಫಲಕ, ಪ್ರಶಸ್ತಿ ಪತ್ರವನ್ನೊಳಗೊಂಡಿದೆ ಎಂದರು. ಪ್ರಶಸ್ತಿ ಪ್ರಧಾನ ಸಮಾರಂಭವು ಕಾಸರಗೋಡಿನಲ್ಲಿ‌ ಇದೇ ತಿಂಗಳು-22ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಕಾಸರಗೋಡು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Key words: KUWJ-award- Announce