ಟ್ರೋಲ್ ಆದ ‘ಕುರುಕ್ಷೇತ್ರ’ ಟ್ರೈಲರ್: ಹೊಸ ಟೀಸರ್ ಬಿಡುಗಡೆಗೆ ಚಿತ್ರ ತಂಡ ನಿರ್ಧಾರ

Promotion

ಬೆಂಗಳೂರು, ಜುಲೈ 11, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಕುರುಕ್ಷೇತ್ರ ಸಿನಿಮಾದ ಟ್ರೈಲರ್ ಸಾಕಷ್ಟು ಟ್ರೋಲ್ ಗೆ ತುತ್ತಾಗಿತ್ತು.

ಟ್ರೈಲರ್ ನಲ್ಲಿ ಹೊಸದೇನೂ ಇಲ್ಲ. ಇದೊಂದು ಡಬ್ಬಾ ಟ್ರೈಲರ್ ಎಂದು ಅಭಿಮಾನಿಗಳು ತಿರಸ್ಕರಿಸಿದ್ದರು. ಇದರಿಂದಾಗಿ ಟ್ರೈಲರ್ ಹೆಚ್ಚೇನೂ ಸದ್ದು ಮಾಡಲಿಲ್ಲ. ಹೀಗಾಗಿ ಚಿತ್ರತಂಡ ಈಗ ಹೊಸ ಟ್ರೈಲರ್ ಬಿಡುಗಡೆ ಮಾಡಲು ಸಿದ್ಧವಾಗಿದೆ.

ಶುಕ್ರವಾರ ಬದಲಾವಣೆಗಳೊಂದಿಗೆ ಹೊಸ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಟ್ರೈಲರ್ ನಲ್ಲಿ ಅಭಿಮಾನಿಗಳು ಹೊರಹಾಕಿರುವ ಅಂಶಗಳನ್ನು ಸೇರ್ಪಡೆಗೊಳಿಸಲು ಚಿತ್ರತಂಡ ಯೋಜನೆ ರೂಪಿಸಿದೆ.