“ಕೆ ಎಸ್ ಆರ್ ಟಿ ಸಿ ಅನ್ನು ಖಾಸಗೀಕರಣ ಮಾಡುವ ಹುನ್ನಾರ ಬಿಜೆಪಿ ಅವರಿಗಿದೆ” : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ

ಮೈಸೂರು,ಏಪ್ರಿಲ್,09,2021(www.justkannada.in) : ಕೆ ಎಸ್ ಆರ್ ಟಿಸಿ ನೌಕರರ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಕಂಪ್ಲೀಟ್ ಫೇಲ್ಯೂರ್ ಆಗಿದೆ. ಕೆ ಎಸ್ ಆರ್ ಟಿ ಸಿ ಅನ್ನು ಖಾಸಗೀಕರಣ ಮಾಡುವ ಹುನ್ನಾರ ಬಿಜೆಪಿ ಅವರಿಗಿದೆ ಅನಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.Illegally,Sand,carrying,Truck,Seized,arrest,driverಕೆ ಎಸ್ ಆರ್ ಟಿಸಿ ನೌಕರರ ಮುಷ್ಕರ ಹಿನ್ನೆಲೆ ಶುಕ್ರವಾರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನಲ್ಲಿ ನರ್ಮ್ ಯೋಜನೆಯಡಿ ನಿರ್ಮಾಣ ಮಾಡಿರುವ ಬಸ್ ನಿಲ್ದಾಣಗಳನ್ನು ಆರ್.ಅಶೋಕ್ ಸಾರಿಗೆ ಸಚಿವರಾಗಿದ್ದಾಗ ಖಾಸಗಿಯವರಿಗೆ ವಹಿಸಿಬಿಟ್ಟರು ಎಂದು ದೂರಿದರು.

ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸಂಧಾನಕ್ಕೂ ಕರೆಯುತ್ತಿಲ್ಲ

ಕೋಡಿಹಳ್ಳಿ ಚಂದ್ರಶೇಖರ್ ಮೋದಿಯವರ ವಿರುದ್ಧವಾಗಿದ್ದಾರೆಂಬ ಕಾರಣಕ್ಕೆ ಅವರನ್ನು ಸಂಧಾನಕ್ಕೂ ಕರೆಯುತ್ತಿಲ್ಲ. ಖಾಸಗಿ ಬಸ್ ನವರಿಗೆ ಸರ್ಕಾರಿ ಬಸ್ ನಿಲ್ದಾಣಕ್ಕೆ ಪ್ರವೇಶ ಕಲ್ಪಿಸಿ ಪೊಲೀಸರು ನಿರ್ವಹಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.KSRTC-Privatization-Doing-Funeral-BJP-KPCC-spokesman-M.Laxman-accusedಸುಮಾರು ಖಾಸಗಿ ಬಸ್ ಗಳ ಇನ್ಸ್ಯೂರೆನ್ಸ್ ಲ್ಯಾಪ್ಸ್ ಆಗಿವೆ, ಖಾಸಗಿ ಬಸ್ ಗಳ ಕಂಡೀಷನ್ ಚೆನ್ನಾಗಿಲ್ಲವೆಂದು ಕೆಲ ಕಡೆಗಳಲ್ಲಿ ಸುದ್ದಿಯಾಗಿದೆ. ಟ್ರೈನಿಗಳನ್ನು ಕರೆದುಕೊಂಡು ಬಸ್ ಚಾಲನೆ ಮಾಡಲು ಒತ್ತಡ ಹೇರುತ್ತಿದ್ದಾರೆ. ಸರ್ಕಾರ ಕೆ ಎಸ್ ಆರ್ ಟಿ ಸಿ ನೌಕರರನ್ನು ಸೌಜನ್ಯದಿಂದ ಕರೆಸಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

key words : KSRTC-Privatization-Doing-Funeral-BJP-KPCC-spokesman-M.Laxman-accused