ಮುಕ್ತ ವಿವಿ ಬಗ್ಗೆ ಅಪಪ್ರಚಾರ ನಡೆಸಿದ್ರೆ ಕಾನೂನು ಕ್ರಮ : ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಎಚ್ಚರಿಕೆ.

Promotion

 

ಮೈಸೂರು, ಜು.13, 2021 : (www.justkannada.in news) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಎಚ್ಚರಿಕೆ ನೀಡಿದರು.

ಮೈಸೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಫೆಸರ್ ಎಸ್ ವಿದ್ಯಾಶಂಕರ್ ಹೇಳಿದಿಷ್ಟು…

jk

ಯುಜಿಸಿ ವಿಧಿಸಿರುವ ನಿಯಮಗಳನ್ನು ಮುಕ್ತ ವಿವಿ ಚಾಚೂ ತಪ್ಪದೇ ಪಾಲಿಸುತ್ತಿದೆ. ಯಾವುದೇ ಹಂತದಲ್ಲೂ ನಿಯಮಗಳ ಉಲ್ಲಂಘನೆ ಆಗಿಲ್ಲ. ಆದರೆ ಇತ್ತೀಚೆಗೆ ಕೆಲ ವ್ಯಕ್ತಿಗಳು ಮುಕ್ತ ವಿವಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ರೀತಿ ಅಪಪ್ರಚಾರ ಮಾಡುತ್ತಿರುವವರು ನಮ್ಮ ಬಳಿ ಬಂದು ಚರ್ಚೆ ನಡೆಸಲಿ. ನಾವು ಅವರಿಗೆ ಸೂಕ್ತ ಮಾಹಿತಿ ನೀಡುತ್ತೇವೆ. ಅದು ಬಿಟ್ಟು ಹಳೆಯ ವಿಚಾರಗಳನ್ನು ಮುಂದಿಟ್ಟುಕೊಂಡು ಮುಕ್ತ ವಿ ವಿ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಬಾರದು. ಅಪಪ್ರಚಾರ ಮಾಡಿದರೆ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಕುಂದಲಿದೆ ಎಂಬುದು ನನ್ನ ಆತಂಕಕ್ಕೆ ಕಾರಣ.

ಆದ್ದರಿಂದ ಇನ್ನು ಮುಂದೆ ಯಾರಾದರೂ ಅಪಪ್ರಚಾರ ಮಾಡಿದರೆ ಅಂತಹವರ ವಿರುದ್ದ ಕಾನೂನು ರೀತಿ‌ ಮಾನ ನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಕೆಎಸ್ಒಯು ಕುಲಪತಿ ಪ್ರೊ. ಎಸ್ ವಿದ್ಯಾಶಂಕರ್ ಎಚ್ಚರಿಸಿದರು.

ಮುಕ್ತ ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ ಹಾಜರಿದ್ದರು.

——-

key words: KSOU-VC-vidyashankar-deformation-case-open-university-ugc