ಕರೋನಾ ಭೀತಿ : ‘ ಫೇಸ್ ಬೇಸ್ಡ್ ಬಯೋಮೆಟ್ರಿಕ್ಸ್ ‘ ಜಾರಿಗೊಳಿಸಿದ ಕರ್ನಾಟಕ ರಾಜ್ಯ ಮುಕ್ತ ವಿವಿ

Promotion

ಮೈಸೂರು, ಏ.23, 2021 : (www.justkannada.in news) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU) ತನ್ನ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಠಿಯಿಂದ ‘ ಫಿಂಗರ್ ಬೇಸ್ಡ್ ಬಯೋಮೆಟ್ರಿಕ್ಸ್ ‘ ಬದಲಿಗೆ ಇದೀಗ ಫೇಸ್ ಬೇಸ್ಡ್ ಬಯೋಮೆಟ್ರಿಕ್ ಜಾರಿಗೊಳಿಸಿದೆ. ಆ ಮೂಲಕ ವಿಶ್ವವಿದ್ಯಾನಿಲಯದ ಸಿಬ್ಬಂದಿ ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಿದೆ.jk
ಈ ಸಂಬಂಧ ಜಸ್ಟ್ ಕನ್ನಡ ಜತೆ ಮಾತನಾಡಿದ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಅವರು ಹೇಳಿದಿಷ್ಟು.
ಮುಕ್ತ ವಿವಿ ಬೋಧಕ ವರ್ಗದವರಿಗೆ ಈ ಮೊದಲು ಬಯೋಮೆಟ್ರಿಕ್ಸ್ ಜಾರಿಗೊಳಿಸಲಾಗಿತ್ತು. ಇದು ಫಿಂಗರ್ ಬೇಸ್ಡ್ ತಂತ್ರಜ್ಞಾನದಲ್ಲಿತ್ತು. ಆದರೆ ಕಳೆದ ವರ್ಷದಿಂದ ಕರೋನಾ ಕರಿನೆರಳು ವಿಶ್ವದ್ಯಾಂತ ವ್ಯಾಪಾಕವಾಗಿರುವ ಹಿನ್ನೆಲೆಯಲ್ಲಿ ಈ ಬಯೋಮೆಟ್ರಿಕ್ಸ್ ಬಳಕೆಗೆ ಹಿಂಜರಿತ ಎದುರಾಯಿತು. ಈ ಹಿನ್ನೆಲೆಯಲ್ಲಿ ಹಾಗೂ ಸಿಬ್ಬಂದಿ ವರ್ಗದ ಆರೋಗ್ಯದ ಕಾಳಜಿಯಿಂದ ಮುಕ್ತ ವಿವಿ ಸಹ, ಬಯೋಮೆಟ್ರಿಕ್ ಬಳಕೆ ಸ್ಥಗಿತಗೊಳಿಸಿತು. ಈಗ ಇದಕ್ಕೆ ಪರ್ಯಾಯವಾಗಿ ಫೇಸ್ ಬೇಸ್ಡ್ ಬಯೋಮೆಟ್ರಿಕ್ಸ್ ಸಿಸ್ಟಂ ಅಳವಡಿಸಿ ಅದನ್ನು ಜಾರಿಗೊಳಿಸಲಾಗುತ್ತಿದೆ.KSOU-karnataka-open-university-biometrics-face.based-mysore-vc- based face biometrics
ಈಗಾಗಲೇ ವಿವಿಯ ಆಡಳಿತ ಭವನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಇಂಥ 10 ಸಿಸ್ಟಮ್ ಗಳನ್ನು ಅಳವಡಿಸಲಾಗುತ್ತಿದೆ. ಆಮೂಲಕ ಸಿಬ್ಬಂದಿ ವರ್ಗದಲ್ಲಿ ಸಮಯ ಪ್ರಜ್ಞೆ ಮೂಡಿಸುವುದು ವಿಶ್ವವಿದ್ಯಾನಿಲಯದ ಉದ್ದೇಶ ಎಂದು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಸ್ಪಷ್ಟಪಡಿಸಿದರು.

ENGLISH SUMMARY….

Corona fear: KSOU introduces face identifying biometric system
Mysuru, Apr. 23, 2021 (www.justkannada.in): Keeping the health of its employees in mind, the Karnataka State Open University (KSOU) has introduced ‘Face-based biometrics’ for the first time.KSOU-karnataka-open-university-biometrics-face.based-mysore-vc- based face biometrics
Speaking to ‘Justkannada’ regarding this Prof. S. Vidyashankar, Vice-Chancellor, KSOU, explained that biometrics were made compulsory for the teaching staff of KOSU earlier. But it was finger-based technology. Due to the ongoing COVID-19 Pandemic and its danger across the world the employees were scared to use it. Hence, we stopped it and have introduced the ‘Face Identification Biometric’ system as an alternative.
“About 10 systems have been installed in various departments in the University, including the Administrative Bhavan. The objective is to educate the employees on discipline and time sense,” he added.
Keywords: KSOU/ Face identifying biometric system/ alternative/ Prof. S. Vidyashankar/ Vice-Chancellor

key words : KSOU-karnataka-open-university-biometrics-face.based-mysore-vc- based face biometrics