BREAKING NEWS : ಲಕ್ಷಾಂತರ KSOU ವಿದ್ಯಾರ್ಥಿಗಳಿಗೆ ಹೈಕೋರ್ಟ್ ಸಿಹಿ ಸುದ್ಧಿ.

KSOU-high.court-good.news-for-students-Karnataka State Open University

 

ಬೆಂಗಳೂರು, ಆ.04, 2022 : (www.justkannada.in news)ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 2013-14, 2014-2015 ನೇ ಸಾಲುಗಳ UGC ಮಾನ್ಯತೆ ತೊಡಕಿಗೆ ಸಿಲುಕಿದ್ದ In-house admitted Non-technical courses ವಿದ್ಯಾರ್ಥಿಗಳಿಗೆ ರಾಜ್ಯ ಹೈಕೋರ್ಟ್ ಇಂದು ಸಿಹಿ ಸುದ್ಧಿ ನೀಡಿದೆ.

Karnataka State Open University -ಕರಾಮುವಿ 2 ತಿಂಗಳ ಅವದಿಯೊಳಗೆ ಪರಿನಿಯಮಾನುಸಾರ ಪರೀಕ್ಷೆ ಬರೆದು ಪಾಸಾದ ಸದರಿ ಸಾಲುಗಳ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪದವಿಗಳನ್ನು ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಜತೆಗೆ ರಾಜ್ಯ ಸರ್ಕಾರ ಹಾಗೂ ಅಂಗ ಸಂಸ್ಥೆಗಳು ಸದರಿ ಸಾಲಿನ ವಿದ್ಯಾರ್ಥಿಗಳ ಪದವಿ ಪರಿಗಣಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.

ಪ್ರಕರಣದ ಹಿನ್ನೆಲೆ :

2013 ನೇ ಸಾಲಿಗಿಂತ ಹಿಂದಿನ ಮಾನ್ಯತೆ ಇದ್ದ ಅವದಿಯ ವಿವಿ ಪದವಿಗಳನ್ನೂ ತಿರಸ್ಕರಿಸುತ್ತಿದ್ದ ಕಾರಣ ರಾಜ್ಯ ಸರ್ಕಾರ ಹಾಗೂ ಕೆಪಿಎಸ್ಸಿ ವಿರುದ್ದ ಕೋರ್ಟ್ ಮೊರೆ ಹೋಗಲಾಗಿತ್ತು. ( WP 34255/2016ರ 27.6.2017). ಪ್ರಕರಣದಲ್ಲಿ ವಿವಿ ಪರ ತೀರ್ಪಿನಂತೆ ವಿವಿ ಪದವೀದರನ್ನು ಪರಿಗಣಿಸಲು ಅನುಕೂಲ ಮಾಡಿಕೊಡಲಾಗಿತ್ತು.

ಕರಾಮುವಿ ಶಿಕ್ಷಕೇತರ ನೌಕರರ ಸಂಘ(ರಿ) ಸಲ್ಲಿಸಿರುವ WP 48379/2017 ಪ್ರಕರಣದಲ್ಲಿನ 01.02.2018ರ ಮಧ್ಯಂತರ ಆದೇಶ (interim Order) ಅನ್ವಯ ರಾಜ್ಯ ಸರ್ಕಾರ 03.05.2018 ರಂದು ಆದೇಶ ಹೊರಡಿಸಿ ಕರಾಮುವಿಯ 2013-14, 2014-2015ನೇ ಸಾಲುಗಳ ಯುಜಿಸಿ ಮಾನ್ಯತೆ ತೊಡಕಿಗೆ ಸಿಲುಕಿದ್ದ In-house admitted Nontechnical courses ವಿದ್ಯಾರ್ಥಿಗಳ ಪದವಿಗಳನ್ನು ನೇಮಕಾತಿ/ಬಡ್ತಿ ಹಾಗೂ ಉನ್ನತ ವ್ಯಾಸಂಗಕ್ಕೆ ಪರಿಗಣಿಸಲು ಆದೇಶಿಸಿತ್ತು. ಈ ಅವಧಿಯಲ್ಲಿ ಕುಲಪತಿಯಾಗಿದ್ದ ಪ್ರೊ.ಶಿವಲಿಂಗಯ್ಯ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆ ಮೂಲಕ ಅವರ ಹಿಂದಿನ  ಶ್ರಮವೂ ಕೋರ್ಟ್ ನ ಈ ಆದೇಶಕ್ಕೆ ಕಾರಣವಾಗಿದೆ.

ಮೇಲಿನ ತೀರ್ಪಿಗೊಳಪಟ್ಟಿರುವ ಪ್ರಕರಣಗಳಲ್ಲಿನ ಮಧ್ಯಂತರ ಆದೇಶ ( Interim Orders) ಆಧಾರದಲ್ಲಿ ವಿವಿಯು 2019 ರಿಂದಲೂ ಅಂಕಪಟ್ಟಿ ಹಾಗೂ Provisional Pass Certificate ನೀಡುತ್ತಾ ಬರುತ್ತಿದೆ.

ಪ್ರಸ್ತುತ ಈ 03.08.2022ರ Common Judgmentಗೆ ಒಳಪಟ್ಟಿರುವ 2013-14 & 2014-15 In-house ವಿದ್ಯಾರ್ಥಿಗಳ ಈ ಪ್ರಕರಣಗಳಲ್ಲಿ ಯುಜಿಸಿ ವಿರುದ್ಧ main prayer ಇದ್ದು, ಅವರ ಶಿಕ್ಷಣ ಕ್ರಮ ಮತ್ತು ಪದವಿಗಳು ತಾಂತ್ರಿಕವಾಗಿ ನಿಯಮಾನುಸಾರ ವಿದ್ದುದರಿಂದ ಹಾಗೂ ಯುಜಿಸಿ ತಜ್ಞರ ಸಮಿತಿ ವಿವಿಯಿಂದ ನೇರವಾಗಿ ನಿರ್ವಹಿಸಲ್ಪಡುವ ಈ ಪ್ರವೇಶಾತಿ/ ಪದವಿಗಳ ಬಗ್ಗೆ ಯಾವುದೇ ತಕರಾರು ವ್ಯಕ್ತಪಡಿಸದಿದ್ದುದರಿಂದ ವಿದ್ಯಾರ್ಥಿಗಳಿಗೆ ಒತ್ತಾಸೆಯಾಗಿಯೇ ವಿವಿ ಪರವಾದ ಹಾಗೂ ದಾಖಲೆಗಳನ್ನು ಮಂಡಿಸಲಾಗಿದ್ದು ಈ ದಿವಸ ಈ ಮಹತ್ವದ ತೀರ್ಪಿಗೆ ದಾರಿಯಾಗಿದೆ.

ತೀರ್ಪಿನಲ್ಲಿ, ಕರಾಮುವಿಯು 2 ತಿಂಗಳ ಅವದಿಯೊಳಗೆ ಪರಿನಿಯಮಾನುಸಾರ ಪರೀಕ್ಷೆ ಬರೆದು ಪಾಸಾದ ಸದರಿ ಸಾಲುಗಳ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪದವಿಗಳನ್ನು ನೀಡುವಂತೆ ಆದೇಶಿಸಿದೆ. ಜತೆಗೆ ರಾಜ್ಯ ಸರ್ಕಾರ ಹಾಗೂ ಅಂಗ ಸಂಸ್ಥೆಗಳು ಸದರಿ ಸಾಲಿನ ವಿದ್ಯಾರ್ಥಿಗಳ ಪದವಿ ಪರಿಗಣಿಸುವಂತೆ ಸೂಚಿಸಿದೆ.

ಯುಜಿಸಿ, 6 ವಾರಗಳ ಅವದಿಯೊಳಗೆ ವಿಚಾರಣೆಯನ್ನು ನಡೆಸಿ ಕರಾಮುವಿಯ ODL ಮತ್ತು In-house ವ್ಯವಸ್ಥೆಯ ಮೂಲಕ ರಿಟ್ ಅರ್ಜಿದಾರರ ವ್ಯಾಸಂಗವಾಗಿದೆಯೇ, ಈ ಸಂದರ್ಭದಲ್ಲಿ ವಿವಿಯಿಂದ U G C ಯ ನಿಯಮಗಳು, ಶೈಕ್ಷಣಿಕ ಮಾನದಂಡಗಳೇನಾದರೂ ಉಲ್ಲಂಘನೆಯಾಗಿವೆಯೇ ಎಂಬುದನ್ನು ಪರಿಶೀಲಿಸಿ ಮಾನ್ಯತೆ ನೀಡಲು ಪರಿಗಣಿಸತಕ್ಕದ್ದು ಹಾಗೂ ಈ‌ ಪ್ರಕ್ರಿಯೆಗೆ ಕರಾಮುವಿಯು ಪೂರಕ ದಾಖಲೆಗಳನ್ನು ಒದಗಿಸತಕ್ಕದ್ದೆಂದು ಆದೇಶಿಸಿದೆ.

ಈ ಮೇಲಿನ ಅಂಶಗಳ ಬಗ್ಗೆ Writ of Mandamus ಆದೇಶ ಹೊರಡಿಸಿದೆ.

key words : KSOU-high.court-good.news-for-students-Karnataka State Open University