ಕೆ.ಆರ್.ಎಸ್ ಡ್ಯಾಂ ಸುರಕ್ಷಿತ: ರೈತರು ಆತಂಕ ಪಡಬೇಕಿಲ್ಲ- ವಿಜಯಕುಮಾರ್.

Promotion

ಮಂಡ್ಯ,ಜುಲೈ,6,2021(www.justkannada.in):  KRS ಡ್ಯಾಂ ಬಿರುಕು ಬಿಟ್ಟಿಲ್ಲ. ರೈತರು ಆತಂಕ ಪಡಬೇಕಿಲ್ಲ ಎಂದು ಕಾವೇರಿ ನೀರಾವರಿ ನಿಯಮದ ಅಧಿಕ್ಷಕ ಅಭಿಯಂತರ ವಿಜಯಕುಮಾರ್ ಹೇಳಿದ್ದಾರೆ.jk

ಈ ಸಂಬಂಧ ಮಾತನಾಡಿರುವ  ಕಾವೇರಿ ನೀರಾವರಿ ನಿಯಮದ ಅಧಿಕ್ಷಕ ಅಭಿಯಂತರ ವಿಜಯಕುಮಾರ್, ಕೆ.ಆರ್.ಎಸ್ ಡ್ಯಾಂ ಸುರಕ್ಷಿತವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಜೊತೆಗೆ ವರದಿ ನೀಡಲಾಗಿದೆ. ಸಂಸದೆ ಸುಮಲತಾ ಅಂಬರೀಷ್ ಗೂ ಮಾಹಿತಿ ನೀಡಲಾಗಿದೆ. ವಿವಾದ ಶುರುವಾದ ಬಳಿಕ ಪರಿಶೀಲನೆ ಮಾಡಿ ವರದಿ ನೀಡಲಾಗಿದೆ. KRSನ ಅಧಿಕಾರಿಗಳು ಪ್ರತೀ ದಿನ ಪರಿಶೀಲನೆ ಮಾಡುತ್ತಾರೆ ಎಂದರು.

ಕ್ರ್ಯಾಕ್ ಬಿಟ್ಟಿದೆ ಎನ್ನವಾದ ವಿಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅದು ಬಿರುಕಿನ ವಿಡಿಯೋ ಅಲ್ಲ. ಗೇಟ್ ಬದಲಾವಣೆ ಮಾಡುವಾಗ ಕಲ್ಲು ಹೊರಗೆ ಬರುತ್ತವೆ. ಅದನ್ನು ಗೇಟ್ ಅಳವಡಿಸಿದ ಬಳಿಕ ಸರಿ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

Key words: KRS Dam- Safe-Farmers -not worry-  Vijayakumar