ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ : ಸುಮಲತಾರಿಗೆ ಯಾರೂ ತಪ್ಪು ಮಾಹಿತಿ ನೀಡಿದ್ದಾರೆ- ಸಚಿವ ನಾರಾಯಣಗೌಡ.

ಮಂಡ್ಯ,ಜುಲೈ,14,2021(www.justkannada.in): ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎನ್ನುವ ವರದಿ ನಮ್ಮ ಬಳಿ ಇದೆ.  ಸಂಸದೆ ಸುಮಲತಾ ಮೇಡಂಗೆ ಯಾರೋ  ತಪ್ಪು ಮಾಹಿತಿ ನೀಡಿದ್ದಾರೆ.  ಮೇಡಂ ಆಫೀಸಿಗೂ ಆ ವರದಿಯನ್ನು ಕಳಿಸಿಕೊಡ್ತೇವೆ. ಅದರ ಬಗ್ಗೆ ಮೇಡಂ ಅವರಿಗೆ ಚಿಂತೆ ಬೇಡ. ಆದ್ರೆ ಅಕ್ರಮ ಗಣಿಗಾರಿಕೆ  ವಿಚಾರದಲ್ಲಿ ಸುಮಲಾತಾರಿಗೆ ಸಾಥ್ ಕೊಡ್ತೇವೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ತಿಳಿಸಿದರು.jk

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ನಾರಾಯಣಗೌಡ, ಅಕ್ರಮ ಗಣಿಗಾರಿಕೆ ಕಳೆದ ಎರಡೂವರೆ ತಿಂಗಳಿಂದ ನಡೆದಿದೆ ಅಂತ ಜ‌ನ ಹೇಳ್ತಿದ್ದಾರೆ. ಎಲ್ಲ ಅಧಿಕಾರಿಗಳನ್ನು ಕರೆದು  ಎಚ್ಚರಿಕೆ ನೀಡಿದ್ದೇನೆ. ಬೇಬಿ ಬೆಟ್ಟದ ತಲೆ‌ನೋವೇ ಬೇಡ ಅಂತ ಹೇಳಿದ್ದೇವೆ. ಅಲ್ಲಿ ಇರುವ ಎರಡು ಮೂರು ಗಣಿಗೆ ಬೇರೆ ಕಡೆ  ಉಚಿತವಾಗಿ ಅವಕಾಶ ಕೊಡಿ ಅಂತ ಡಿಸಿಯವರಿಗೆ ಹೇಳಿದ್ದೇನೆ ಎಂದರು.

ಗಣಿಗಾರಿಕೆ ನಡೆಯಲೇಬೇಕು ಕಲ್ಲು ಜಲ್ಲಿ ಎಂ ಸ್ಯಾಂಡ್ ಬೇಕೇ ಬೇಕಾಗುತ್ತದೆ. ಅಧಿಕೃತವಾಗಿ ಅನುಮತಿ ಪಡೆದುಕೊಂಡವರು ಕ್ರಮ ಬದ್ದವಾಗಿ ನಡೆಸಲಿ. ಹಲವರು ರಾಯಲ್ಟಿ ಕಟ್ಟುತ್ತಿಲ್ಲ, ರಾಯಲ್ಟಿ ಕರೆಕ್ಟಾಗಿ ಕಟ್ಟಿಕೊಂಡು ಹೋಗಬೇಕು ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರಕ್ಕೂ ಅನುಕೂಲ. ಅದನ್ನು ಖಡಾಖಂಡಿತವಾಗಿ ಹೇಳಿದ್ದೇವೆ. ನೂರು ಲಾರಿ ಜಲ್ಲಿ ಹೊಡೆದು 5-ರಿಂದ 10 ಲಾರಿಗೆ ರಾಯಲ್ಟಿ ಕಟ್ಟೋದು ತಪ್ಪು. ರಸ್ತೆಗಳು, ಪರಿಸರ ಹಾಳಾಗ್ತಿದೆ. ಎಸ್.ಪಿ ಮಟ್ಟದ ಅಧಿಕಾರಿಗಳಿಗೂ ಅಕ್ರಮ ಗಣಿ ನಡಿತಾ ಇದ್ರೆ ಕ್ರಮ ತೆಗೆದುಕೊಳ್ಳೋದಕ್ಕೆ ಹೇಳಿದ್ದೇವೆ. ಏನಾದ್ರೂ ಮುಂದೆ ಆ ರೀತಿ ಕಂಡು ಬಂದರೆ ನಾನೇ ಸೀಜ್ ಮಾಡಿಸ್ತೇನೆ ಎಂದು ಸಚಿವ ನಾರಾಯಣಗೌಡ ತಿಳಿಸಿದರು.

ENGLISH SUMMARY…

KRS dam has not developed any cracks: Someone has given wrong information to Sumalatha: Minister Narayanagowda
Mandya, July 14, 2021 (www.justkannada.in): “The report clarifying that the KRS dam has not developed any cracks is with us. Someone has given the wrong information to MP Sumalatha. We will send that report to her office also. We request her not to worry about it. But we will support her in the illegal mining activities issue,” said Mandya District In-charge Minister Narayanagowa.
Speaking to the press persons today, in Mandya Minister Narayanagowda said, “People are saying that the illegal mining activities are going on for the last two-and-a-half years. However, we have warned all the officers concerned. We have been informed to keep away the Babybetta issue. We have requested the Deputy Commissioner to show some other place to the two-three mines which are functioning there.”
Further, he explained, “mining should continue as crushed stones and M-Sand is required for construction activities. Let the license holders run it legally. Many are not paying royalty to the government, they should pay royalty properly. It will also help in the development of the district and also the government. We are quite clear about it. Paying royalty only to only 5-10 lorries against 100 lorries is wrong! Roads and the environment are getting damaged. We have informed the Superintendent of Police and other such level officers to initiate action against illegal mining activities. If any such illegal activities are found in the future I will get it seized,” the Minister said.
Keywords: Mandya District In-charge Minister/ Narayanagowda/ MP Sumalatha/ illegal mining activities/KRS dam/ crack/ report

Key words: KRS Dam – not cracked-Sumalatha ambarish – wrong information- Minister -Narayana Gowda.