ಅಕ್ರಮವನ್ನ ಅಂತ್ಯಕ್ಕೆ ಕೊಂಡೊಯ್ಯುವುದೇ ನನ್ನ ಪ್ರಯತ್ನ- ಸಂಸದೆ ಸುಮಲತಾ ಅಂಬರೀಶ್.

Promotion

ಮಂಡ್ಯ,ಜುಲೈ,13,2021(www.justkannada.in):  ಕೆಆರ್ ಎಸ್ ಸುತ್ತಾಮುತ್ತಾ ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಅಕ್ರಮವನ್ನ ಅಂತ್ಯಕ್ಕೆ ಕೊಂಡೊಯ್ಯುವುದೇ ನನ್ನ ಪ್ರಯತ್ನವಾಗಿದೆ ಎಂದು ತಿಳಿಸಿದ್ದಾರೆ.jk

ಸಂಸದೆ ಸುಮಲತಾ ಅಂಬರೀಶ್ ಎರಡು ದಿನಗಳ ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಈ ಮಧ್ಯೆ ಅಕ್ರಮ ಗಣಿಗಾರಿಕೆ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್,  ಅಕ್ರಮ ಗಣಿಗಾರಿಕೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ನಾನು ಒತ್ತಾಯಿಸುತ್ತೇನೆ.  ಇಲ್ಲಿ ಒತ್ತಡ ಹೆಚ್ಚಿರಬಹುದು. ಆಗ ಕೇಂದ್ರದಿಂಧ ತನಿಖೆ ನಡೆಸಬೇಕು. ಸೆಂಟ್ರಲ್ ಏಜನ್ಸಿ ತನಿಖೆಯಿಂದ ತನಿಖೆಯಾಗಬೇಕು. ಅಲ್ಲಿ ಅಕ್ರಮ ನಡೆದಿದೆ ಎಂದು ಬರಿಗಣ್ಣಿಗೆ ಗೊತ್ತಾಗುತ್ತೆ. ರಾಜ್ಯದ ಜನರು ಈ ಅಕ್ರಮ ನೋಡಬೇಕು. ಸ್ಥಳೀಯರನ್ನ ಮಾತನಾಡಿಸಿ ಎಂದು ಮನವಿ ಮಾಡಿದ್ದೇನೆ.  ರಾಜ್ಯ ಸರ್ಕಾರದಿಂದ ಸರಿಯಾಗಿ ತನಿಖೆ ಆಗದಿದ್ದರೇ ದೊಡ್ಡಮಟ್ಟದ ತನಖೆಗೂ ಸಿದ್ಧ  ಎಂದು ಸುಮಲತಾ ಅಂಬರೀಶ್ ತಿಳಿಸಿದರು.

ನಟ ದರ್ಶನ್ ಹೆಸರಿನಲ್ಲಿ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್, ಒಂದು ವಾರದ ಹಿಂದೆ ಈ ಬಗ್ಗೆ ಹೇಳಿದ್ದರು. ಆದರೆ ಈ ಬಗ್ಗೆ ಚರ್ಚಿಸಿರಲಿಲ್ಲ.  ನ್ಯಾಯದ ಪರ ನನ್ನ ಬೆಂಬಲವಿದೆ. ನಿರ್ಮಾಪಕ ಉಮಾಪತಿ ಯಾರೆಂದು ಗೊತ್ತಿಲ್ಲ ಎಂದರು.

ಸುಮಲತಾ ಮತ್ತು ರಾಕ್ ಲೈನ್ ವೆಂಕಟೇಶ್ ಫೋಟೊ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದೆ ಸುಮಲತಾ ಅಂಬರೀಶ್,  ಒಂದಲ್ಲ ಇಂತಹ ಸಾವಿರಾರು ಲಕ್ಷಾಂತರ ಫೋಟೊ ಇದೆ. ಸಿನಿಮಾದಲ್ಲಿ ಹಾಡು ಎಲ್ಲಾ ಇದೆ  ಎಲ್ಲವನ್ನೂ ಹಾಕೋದಕ್ಕೆ ಹೇಳಿ ಮನರಂಜನೆ ಸಿಗುತ್ತೆ. ಎಂದು ಲೇವಡಿ ಮಾಡಿದರು.

Key words: KRS-dam- Illegal mining-MP Sumalatha Ambarish