ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಇಬ್ಬರು ಕೋಚ್’ಗಳಿಗೆ ನೋಟಿಸ್

Promotion

ಬೆಂಗಳೂರು, ಸೆಪ್ಟೆಂಬರ್ 23, 2019 (www.justkannada.in): ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಕೇಸ್ ನಲ್ಲಿ ಎರಡು ಕೆಪಿಎಲ್ ಪ್ಯಾಂಚೈಸಿ ಕೋಚ್​ಗಳಿಗೆ, ಸಿಸಿಬಿ ನೊಟೀಸ್ ನೀಡಿದೆ.

ಕೆಪಿಎಲ್​ನಲ್ಲಿ ಬೇರೆ ಬೇರೆ ತಂಡಗಳಿಗೆ ಬ್ಯಾಟಿಂಗ್ ಕೋಚ್ ಆಗಿರುವ ಇಬ್ಬರಿಗೆ, ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ತನಿಖಾಧಿಕಾರಿ ನೊಟೀಸ್ ನೀಡಿದ್ದಾರೆ.

ಸಿಸಿಬಿಯ ಪ್ರಾಥಮಿಕ ತನಿಖೆಯಲ್ಲಿ ಈ ಕೋಚ್ ಗಳು ಬ್ಯಾಟ್ಸ್​ಮನ್ ಗಳನ್ನು ಬುಕ್ಕಿಗಳ ಜೊತೆ ಲಿಂಕ್ ಮಾಡಿಕೊಡುತ್ತಿದ್ದರು ಎನ್ನುವ ಮಾಹಿತಿ ಸಿಕ್ಕಿದ್ದು, ಕೋಚ್​ಗಳ ಕಾಲ್ ಡಿಟೇಲ್ಸ್ ಆಧಾರದ ಮೇಲೆ ಪತ್ತೆ ಮಾಡಲಾಗಿದೆ.