ಹೆಚ್.ಡಿಕೆ ವಿರುದ್ಧ ವಾಗ್ದಾಳಿ:  ಮೈಸೂರು ಪಾಲಿಕೆ ಮೈತ್ರಿ ಹಿಂದಿನ ಸತ್ಯಗಳನ್ನು ಬಿಚ್ಚಿಟ್ಟ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್…

ಮೈಸೂರು,ಫೆಬ್ರವರಿ,26,2021(www.justkannada.in): ಮೈಸೂರು ಮೇಯರ್ ಜೆಡಿಎಸ್ ಪಾಲಾದ ವಿಚಾರ ಸಂಬಂಧ,  ಇಡೀ ದೇಶದಲ್ಲಿ ಕಾಂಗ್ರೆಸ್ ಏನು ಹೇಳುತ್ತೋ ಹಾಗೇ ನಡೆದುಕೊಂಡಿದೆ. ಅದೇ ರೀತಿ ಈ ಬಾರಿ ಕಾಂಗ್ರೆಸ್ ಗೆ ಮೇಯರ್ ಕೊಡಬೇಕಿತ್ತು. ಜೆಡಿಎಸ್ ನಾಟಕ ಆಡಿಕೊಂಡು ಅಧಿಕಾರ ಪಡೆದಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.jk

ಮೈಸೂರು ಮಹಾನಗರ ಪಾಲಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತು ಮೀರಿ ಮೈತ್ರಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ , ಮೈತ್ರಿ ಹಿಂದಿನ ಸತ್ಯಗಳನ್ನು ಬಿಚ್ಚಿಟ್ಟರು.

ಜೆಡಿಎಸ್ ನಾಟಕ ಆಡಿಕೊಂಡು ಅಧಿಕಾರ ಪಡೆದಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಆಟ ಆಡಿದರು. ಸಿದ್ದರಾಮಯ್ಯ ಜೆಡಿಎಸ್ ಒಂದು ರಾಜಕೀಯ ಪಕ್ಷ ಅಲ್ಲ ಅಂತ ಹೇಳಿದ್ದಾರೆ. ಅದು ಸರಿಯಾಗಿಯೇ ಇದೆ. ಜೆಡಿಎಸ್‌ಗೆ ಯಾವುದೇ ತತ್ವ ಸಿದ್ದಾಂತ ಇಲ್ಲ. ಜೆಡಿಎಸ್‌ ಯಾವ ರೀತಿ ರಾಜಕೀಯ ಪಕ್ಷ ಅಂತ ಕುಮಾರಸ್ವಾಮಿ ಹೇಳಲಿ. ಜೆಡಿಎಸ್ ಅಧಿಕಾರ ಬೇಕಾದಾಗ ಬಿಜೆಪಿ ಪರ ಹೋಗುತ್ತೆ, ನಂತರ ಇಲ್ಲಿ ಬರುತ್ತೆ.

ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಒಪ್ಪಂದ ಮಾಡಿಕೊಂಡಿತ್ತು. ಸಭಾಪತಿ ಸ್ಥಾನ ಜೆಡಿಎಸ್ ಗೆಕೊಟ್ಟು ಮೈಸೂರು, ತುಮಕೂರಿನಲ್ಲಿ ಮೇಯರ್ ಬಿಜೆಪಿಗೆ ಬಿಟ್ಟುಕೊಡುವ ಒಪ್ಪಂದವಾಗಿತ್ತು ಎಂದರು.

ಹೆಚ್.ಡಿ ಕುಮಾರಸ್ವಾಮಿಗೆ ಎಚ್ಚರಿಕೆ ಕೊಟ್ಟ ಎಂ. ಲಕ್ಷ್ಮಣ್…

ಹಾಗೆಯೇ ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ ಎಂ.ಲಕ್ಷ್ಮಣ್, ಕಾರಣಾಂತರಗಳಿಂದ ನಿಮ್ಮನ್ನು ಬೆಂಬಲಿಸಿದ್ದೇವೆ. ಈಗ ನೀವು ತೊಡೆ ತಟ್ಟುವ ಕೆಲಸ ಮಾಡಬೇಡಿ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಸಿದ್ದರಾಮಯ್ಯ ಗೆ ನಿವ್ಯಾರು ಪಾಠ ಕಲಿಸಲು ಆಗಲ್ಲ. ಜೆಡಿಎಸ್‌ ಹಾಗೂ ಬಿಜೆಪಿಯಿಂದ ಪಾಠ ಕಲಿಸಲು ಆಗಲ್ಲ. ನೀವು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಮಧ್ಯೆ ತಂದಿಡುತ್ತಿದ್ದೀರಿ. ನಿಮಗೆ ಅಷ್ಟಿದ್ದರೆ ನೇರವಾಗಿ ಕಾಂಗ್ರೆಸ್ ವಿರುದ್ಧ ನಿಲ್ಲಿ ಎಂದು ಸವಾಲು ಹಾಕಿದರು. KPCC –spokesperson- M Lakshman- Mysore –jds- alliance-hd kumaraswamy

ಎಂ.ಪಿ.ಪ್ರಕಾಶ್, ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಕಟ್ಟಿದ್ದಾರೆ….

ಹಾಗೆಯೇ ಜೆಡಿಎಸ್ ಪಕ್ಷ ಕಟ್ಟಿದವರು ನೀವಲ್ಲ. ಎಂ.ಪಿ.ಪ್ರಕಾಶ್, ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಕಟ್ಟಿದ್ದಾರೆ. ನೀವು ಅದನ್ನ ಫ್ಯಾಮಿಲಿ ಟ್ರಸ್ಟ್ ಮಾಡಿಕೊಂಡಿದ್ದೀರಿ. ನೀವು ಸಿದ್ದರಾಮಯ್ಯ ಹೊರ ಹಾಕಿದಾಗ ಪಕ್ಷ ಕಟ್ಟಿದ್ದರು. ದೇವೇಗೌಡರು ಕಟ್ಟಿದ ಪಕ್ಷ ಏನಾಯ್ತು ಹೇಳಿ. ಈಗ ಒಂದು ಪಕ್ಷ ಕಟ್ಟಿ ತೋರಿಸಿ. ಸುಮ್ಮನೆ ದಾರಿಯಲ್ಲಿ ಸಿದ್ದರಾಮಯ್ಯ ಬಗ್ಗೆ ಮಾತಾಡಿ ಏನೂ ಆಗಲ್ಲ. ನೀವು ಸಿಎಂ ಆಗಿ ಹೇಗೆ ಅಧಿಕಾರ ಮಾಡಿದ್ರಿ ಜನರಿಗೆ ಗೊತ್ತಿದೆ ಎಂದು ಹೆಚ್.ಡಿಕೆ ವಿರುದ್ಧ ಎಂ.ಲಕ್ಷ್ಮಣ್ ಹರಿಹಾಯ್ದರು.

Key words: KPCC –spokesperson- M Lakshman- Mysore –jds- alliance-hd kumaraswamy