ಕೆ.ಸಿ ವೇಣುಗೋಪಾಲ್ ಭೇಟಿ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚಿಸಿಲ್ಲ-ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ…..

Promotion

ನವದೆಹಲಿ,ಜ,14,2020(www.justkannada.in):  ಕೆಸಿ ವೇಣುಗೋಪಾಲ್ ಭೇಟಿ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂಬಂಧ ಹೈಕಮಾಂಡ್ ಬುಲಾವ್ ನೀಡಿದ ಹಿನ್ನಲೆ ನವದೆಹಲಿಗೆ ತೆರಳಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ರನ್ನ ಭೇಟಿಯಾಗಿ ಚರ್ಚಿಸಿದರು. ಭೇಟಿ ಬಳೀಕ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ವೇಣುಗೋಪಾಲ್ ಭೇಟಿ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಿಲ್ಲ. ರಾಜ್ಯ ರಾಜಕೀಯದ ಬಗ್ಗೆ ನಾವು  ಮಾತನಾಡಿದ್ದೇವೆ ಎಂದರು.

ಹಾಗೆಯೇ  ಸಂಜೆ 4.30ಕ್ಕೆ ಸೋನಿಯಾಗಾಂಧಿ ಅವರನ್ನ ಭೇಟಿ ಮಾಡಿ ಚರ್ಚಿಸಲಿದ್ದೇನೆ ಎಂದರು. ಕಾಂಗ್ರೆಸ್ ನಾಯಕರ ಜತೆ ಚರ್ಚೆ ವೇಳೆ ಬಿಜೆಪಿ ವಿರುದ್ದ ಕಿಡಿಕಾರಿದ ಸಿದ್ಧರಾಮಯ್ಯ, ಉಪಚುನಾವಣೆಯಲ್ಲಿ ಬಿಜೆಪಿ ದುಡ್ಡಿನಿಂದ ಗೆದ್ದಿದೆ.  ಒಂದೊಂದು ಕ್ಷೇತ್ರಕ್ಕೆ 100 ಕೋಟಿ ಖರ್ಚು ಮಾಡಿದ್ದಾರೆ.   ಜನರನ್ನ ಭ್ರಷ್ಟರನ್ನಾಗಿ ಮಾಡಿ ಚುನಾವಣೆ ನಡೆದಿದೆ ಬಿಜೆಪಿಯವರು ಹಣಬಲದಿಂದ ಗೆದ್ದಿದ್ದಾರೆ ಆರೋಪ ಮಾಡಿದರು.

ಬಿಜೆಪಿ ಸರ್ಕಾರದ ಬಳಿ ದುಡ್ಡಿಲ್ಲ, ಕೆಲಸ ಮಾಡಲು ಬಿಜೆಪಿಗೆ ಆಸಕ್ತಿ ಇಲ್ಲ. ಸಿಎಂ ಬಿಎಸ್ ವೈ ಬಳಿ 16 ಇಲಾಖೆಗಳಿವೆ. ಒಬ್ಬರೇ ಇಷ್ಟೊಂದು ಇಲಾಖೆಗಳನ್ನ ನಿಭಾಯಿಸಬಹುದಾ..? ಜಿಲ್ಲಾ ಸಚಿವರು ಸಹ ಜನರ ಕಷ್ಟ ಕೇಳುತ್ತಿಲ್ಲ. ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಆಗಲಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Key words: KPCC president- position -not discussed -KC Venugopal-Former CM -Siddaramaiah